ಹಂಸಕ್ಷೀರ ನ್ಯೂಸ್

True Strories on Netflix – ನೆಟ್ ಫ್ಲಿಕ್ಸ್ ನಲ್ಲಿರುವ ಅತ್ಯುತ್ತಮ ನೈಜ ಘಟನೆಯಾಧಾರಿತ ಚಿತ್ರಗಳು – Watch now

ನೆಟ್ ಪ್ಲಿಕ್ಸ್ ಅಂತಾರಾಷ್ಟ್ರೀಯ ಕಂಟೆಂಟ್ ಗಳ ದೊಡ್ಡ ಬಂಡಾರವನ್ನೇ ಹೊಂದಿದೆ. ಇವುಗಳಲ್ಲಿ ಹಲವಾರು ನೈಜ ಘಟನೆ ಆಧಾರಿತ ಚಲನಚಿತ್ರಗಳು ಕೂಡ ಇವೆ. ಬರೀ ಫಾಂಟಸಿ ಕಥೆಗಳನ್ನೇ ನೋಡುತ್ತಾ, ಕೇಳುತ್ತಾ ಬಂದ ಜನರಿಗೆ ನೈಜ ಘಟನೆ ಆಧಾರಿತ (True Strories on Netflix) ಚಿತ್ರಗಳು ಇತ್ತೀಚಿಗೆ ಹೆಚ್ಚಿನ ಆಸಕ್ತಿಯನ್ನು ಮೂಡಿಸುತ್ತಿವೆ.

ನೆಟ್ ಪ್ಲಿಕ್ಸ್ ನಲ್ಲಿ ಇಂತಹ ಹಲವಾರು ಕಂಟೆಂಟ್ (True Strories on Netflix) ಗಳು ಇದ್ದರೂ ಕೂಡ ಅವುಗಳಲ್ಲಿ ಕೆಲವು ನೋಡಲೇಬೇಕಾದ ಮೂವಿಗಳನ್ನು ನಾವು ನಿಮಗೆ ಇಂದು ಸಲಹೆ ಮಾಡಲಿದ್ದೇವೆ. ಇದು ಯಾವುದೇ ರಾಂಕಿಂಗ್ ಆಧಾರಿತ ಪಟ್ಟಿ ಅಲ್ಲ ಹಾಗೂ ಇದು ನಾವು ನೋಡಿದ ಚಲನಚಿತ್ರಗಳಲ್ಲಿ ಉತ್ತಮ ಎಂದು ಅನ್ನಿಸಿದ ಚಲನಚಿತ್ರಗಳಷ್ಟೇ. ಇದಲ್ಲದೆಯೂ ಬೇರೆ ಓಟಿಟಿಗಳಲ್ಲಿ ಹಾಗೂ ನೆಟ್ ಫ್ಲಿಕ್ಸ್ ನಲ್ಲೆ ಬೇರೆ ನಿಜ ಘಟನೆ ಆಧಾರಿತ ಚಿತ್ರಗಳು ನಿಮಗೆ ಇಷ್ಟ ಆಗಬಹುದು ಹಾಗಿದ್ದರೆ ನಮ್ಮ ಪಟ್ಟಿಯನ್ನು ನೋಡೋಣ.

 

True Strories on Netflix
True Strories on Netflix

ಫ್ರೂಟ್ ವೇಲ್ ಸ್ಟೇಷನ್ – 2013

ಇದು 2009ರಲ್ಲಿ ಅಮೆರಿಕದ ಆಕ್ಲಾಂಡ್‌ನ ಕ್ಯಾಲಿಫೋರ್ನಿಯ ದಲ್ಲಿ ನಡೆದ ನೈಜಾಧಾರಿತ ಘಟನೆಯಾಗಿದೆ. 2009ರ ಹೊಸ ವರ್ಷದ ದಿನ ಬೆಳಗಿನ ಜಾವ ಪೊಲೀಸ್ ಆಸ್ಕರ್ ಗ್ರಾಂಡ್ ಎನ್ನುವವನನ್ನು ಗುಂಡಿಕ್ಕಿ ಸಾಯಿಸುತ್ತಾರೆ. ಈ ಘಟನೆ ಕೇವಲ ಸಿಸಿ ಕ್ಯಾಮೆರಾ ಗಳಲ್ಲಿ ಅಷ್ಟೇ ಅಲ್ಲದೆ ಆಗ ತಾನೇ ಬಳಕೆಗೆ ಬಂದ ಸೆಲ್ ಫೋನ್ ಗಳಲ್ಲಿ ಕೂಡ ರೆಕಾರ್ಡ್ ಆಗುತ್ತದೆ. ಇದಾದ ಬಳಿಕ ಏನಾಯಿತು ಎನ್ನುವುದು ಕಥಾ ಹಂದರ ಆಗಿದೆ. ಮೈಕಲ್ ಬಿ ಜಾರ್ಡನ್ ಅವರು ಆಸ್ಕರ್ ಗ್ರಾಂಡ್ ನ ಪಾತ್ರವನ್ನು ತುಂಬಾ ಎಫೆಕ್ಟಿವ್ ಆಗಿ ನಿಭಾಯಿಸಿದ್ದಾರೆ ಅಕಾಡೆಮಿ ವಿನ್ನರ್ ಫಾರೆಸ್ಟ್ ಅವರು ನಿರ್ಮಿಸಿದ ಈ ಚಲನಚಿತ್ರವನ್ನು ನೀವು ನೋಡಲೇಬೇಕು.

ದಿ ಇಂಟಚೆಬಲ್ಸ್ – 2012

ರೋಲರ್ ಕೋಸ್ಟರ್ ರೈಡ್‌ನ ಅನುಭವವನ್ನು ನೀಡುವ ಚಲನಚಿತ್ರ ಇದಾಗಿದೆ. ಒಬ್ಬ ಶ್ರೀಮಂತ ಪಾರ್ಶ್ವ ವಾಯುವಿಗೆ ಒಳಗಾಗಿ ಕಷ್ಟಪಡುತ್ತಿರುತ್ತಾರೆ. ಅವರಿಗೆ ಓರ್ವ ಸಹಾಯಕ ಸಿಗುತ್ತಾರೆ. ಇದಾದಮೇಲೆ ಅವರಿಬ್ಬರ ಜೀವನದಲ್ಲಿ ನಡೆಯುವ ಘಟನೆಗಳು ಏನು ಎನ್ನುವುದು ಚಿತ್ರದ ಮುಂದಿನ ಅಂಶವಾಗಿದೆ. ಹೊಟ್ಟೆ ಹುಣ್ಣಾಗುವಂತೆ ನಕ್ಕ ಮರುಕ್ಷಣವೇ ಕಣ್ಣು ತುಂಬಿ ನೀರು ಬಂದಿರುತ್ತದೆ. ಇದು ಕೇವಲ ನಮ್ಮ ಪಟ್ಟಿಯಲ್ಲಿ ಅಷ್ಟೇ ಅಲ್ಲದೆ ಜಗತ್ತಿನ ಬಹಳಷ್ಟು ಟಾಪ್ ಟೆನ್ ಮೂವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವುದು ಖಂಡಿತ.

ಆಪರೇಷನ್ ಒಡೆಸಾ – 2018

ಇದು ಚಲನಚಿತ್ರ ಅಲ್ಲ ಡಾಕ್ಯುಮೆಂಟರಿ (True Strories on Netflix) ಎಂದು ಹಲವಾರು ಜನ ಹೇಳಿದರೂ ನೋಡಲೇಬೇಕಾದ ನೈಜ ಘಟನೆ ಆಧಾರಿತ ಕಂಟೆಂಟ್ ಆದ್ದರಿಂದ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ. ಎಫ್ ಬಿ ಐ ಪಾಲ್ಬೋ ಎಸ್ಕೋಬಾರ್ ಮತ್ತು ರಷಿಯನ್ ಮಾಫಿಯಾ ಒಂದು ಸಬ್ ಮರಿನ್ ಡೀಲ್ ನಲ್ಲಿ ಹೇಗೆ ಮೋಸ ಹೋಗುತ್ತಾರೆ ಎಂಬುದು ಕಥೆಯಾಗಿದೆ. ಇದಕ್ಕಿಂತ ಹೆಚ್ಚಿನ ಕಥೆಯನ್ನು ಹೇಳಿದರೆ ನಿಮ್ಮಲ್ಲಿ ಆಸಕ್ತಿ ಇರೋದಿಲ್ಲ ಆದ್ದರಿಂದ ಖಂಡಿತ ನೋಡಲೇಬೇಕಾದ ಚಿತ್ರ ಇದಾಗಿದೆ.

ಫೀಲೋಮಿನ 2013

ಸ್ಟೀವ್ ಕೂಗನ್ ಅವರಿಗೆ ಸ್ಕ್ರಿಪ್ಟ್ ಬರೆಯುವುದರಲ್ಲಿ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೆ ಯಾವ ತರಹದ ಸ್ಕ್ರಿಪ್ಟ್ ಹೊರಬರುತ್ತದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಸಿನಿಮಾ ಇದೆ. ಒಬ್ಬ ಮಹಿಳೆ ಹಲವಾರು ವರ್ಷಗಳ ಹಿಂದೆ ಬಿಡಬೇಕಾಗಿ ಬಂದ ಮಗುವನ್ನು ಹುಡುಕುವ ಚಿತ್ರ ಇದಾಗಿದೆ. ಟ್ರಾಜಿಕ್ ಎನ್ನುವುದಾದ ಕಥೆಯ ಹಂದರ ಇದ್ದರೂ ಕೂಗನ್ ಅವರ ವಿಟ್ಟಿ ಸ್ಕ್ರಿಪ್ಟ್ ರೈಟಿಂಗ್ ಅಲ್ಲಲ್ಲಿ ನಗುತರಿಸುವುದು ಸುಳ್ಳಲ್ಲ. ಸ್ಟೀವನ್ ಫ್ರಿಯರ್ಸ್ ಅವರ ನಿರ್ದೇಶನ ಕೂಡ ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ. ಕೇವಲ ಬರಹಗಾರ ನಿರ್ದೇಶಕ ಅಲ್ಲದೆ ಎಲ್ಲಾ ಪಾತ್ರಗಳು ಕೂಡ ಈ ಚಿತ್ರಕ್ಕೆ ಹೇಳಿ ಮಾಡಿಸಿದಂತಿವೆ.

ಫ್ರಾಸ್ಟ್/ನಿಕ್ಸನ್ –  2008

ವಾಟರ್ ಗೇಟ್ ಸ್ಕಾಂಡಲ್ ಬಗ್ಗೆ ನೀವು ಕೇಳಿರಬಹುದು ಅಥವಾ ನಿಮಗೆ ತಿಳಿಯದೇ ಇರಬಹುದು. ಎರಡೂ ಸಂದರ್ಭಗಳಲ್ಲೂ ಫ್ರಾಸ್ಟ್/ನಿಕ್ಸನ್ ನೋಡಲೇಬೇಕಾದ ಸಿನಿಮಾ ಆಗಿದೆ. ವಾಟರ್ ಗೇಟ್ ಸ್ಕಾಂಡಲ್ ಬಳಿಕೆ ಸಾಮಾಜಿಕ ಜೀವನದಿಂದ ಹಿಂದೆ ಸರಿದಿದ್ದ ನಿಕ್ಸನ್ ಹಳೆಯ ಜೀವನಕ್ಕೆ ಮರಳಿ ಬರಲು ಸಂದರ್ಶನಗಳ ಸಹಾಯ ಪಡೆಯಲು ನಿರ್ಧರಿಸುತ್ತಾರೆ. ಬ್ರಿಟೀಷ್ ರಿಯಾಲಿಟಿ ಟಿವಿ ಹೋಸ್ಟ್, ಡೇವಿಡ್ ಫ್ರೋಸ್ಟ್ ಇವರ ಸಂದರ್ಶನ ಪಡೆಯಲು ನೇಮಕ ಆಗುತ್ತಾರೆ. ಇಬ್ಬರಿಗೂ ತಮ್ಮ ಕೆರಿಯರ್ ನಲ್ಲಿ ಇದು ಬಹಳ ಪ್ರಮುಖ ಸಂದರ್ಶನ ಆಗಿರುತ್ತದೆ. ಫ್ರಾಸ್ಟಿಗೆ ನಿಕ್ಸನ್ನ ಕನ್ಫೆಷನ್ ಬೇಕಾಗಿರುತ್ತದೆ. ನಿಕ್ಸನ್ ಅಂತಹ ಯಾವುದೇ ಸ್ಟೇಟ್ಮೆಂಟ್ ಕೊಡಲು ಸಿದ್ಧರಿರುವುದಿಲ್ಲ. ಇದು ಮೂಲತಃ ಒಂದು ನಾಟಕ ಆಗಿದ್ದು ಅದರ ಚಲನಚಿತ್ರ ರೂಪ ಬಹಳ ಚೆನ್ನಾಗಿ ಮೂಡಿ ಬಂದಿದೆ.

 

ನಿಮಗಿದು ಗೊತ್ತೇ ?

ನೆಟ್ ಫ್ಲಿಕ್ಸ್ ನಲ್ಲಿ ಸುಮಾರು 2400 ರಷ್ಟು ಒರಿಜಿನಲ್ ಕಂಟೆಂಟ್ ಗಳಿವೆ. ಹಲವಾರು ಜನರು ಇದೇ ಕಾರಣಕ್ಕೆ ನೆಟ್ ಫ್ಲಿಕ್ಸ್ ಚಂದಾದಾರರಾಗುತ್ತಾರೆ.

 

ಸೊಸೈಟಿ ಆಫ್ ದಿಸ್ ಸ್ನೋ 2023

ಇದು 1972ರ ವಿಮಾನ ಅಪಘಾತದ ಬಗ್ಗೆ ಇರುವ ಚಿತ್ರವಾಗಿದೆ. 1972 ರಲ್ಲಿ ಉರುಗ್ವೆಯ ಏರ್ ಫೋರ್ಸ್ ಫ್ಲೈಟ್ 571 ಚಿಲಿಗೆ ಒಂದು ರಗ್ಬಿ ತಂಡವನ್ನು ಕೊಂಡೊಯ್ಯುತ್ತಿರುತ್ತದೆ. ಫ್ಲೈಟ್ ನಲ್ಲಿದ್ದ 45 ಜನರಲ್ಲಿ ಹದಿನಾರು ಜನ ಬದುಕುಳಿಯುತ್ತಾರೆ. ಆದರೆ ಹೊರಬರಲು ಅಸಾಧ್ಯವಾದ ಜಾಗ ಒಂದರಲ್ಲಿ ಸಿಲುಕಿಕೊಳ್ಳುತ್ತಾರೆ. ಮನುಷ್ಯ ತಾನೇ ಸಾಯುತ್ತಾನೆ ಎಂದಾಗ, ತಿನ್ನಲು ಆಹಾರವೇ ಇಲ್ಲ ಎಂದಾಗ ಅವನಿಗೆ ಇನ್ನೊಬ್ಬ ಮನುಷ್ಯನು ಆಹಾರವಾಗುತ್ತಾನೆ. ಆದರೆ ಈ 16 ಜನರಲ್ಲಿ ಎಲ್ಲರೂ ಬದುಕುಳಿದರೆ ? ಹೇಗೆ ಬದುಕುಳಿದರು ? ಎಂಬ ಬಗೆಗಿನ ಚಿತ್ರ ಇದಾಗಿದೆ.

ಹೋಲಿ ಸ್ಪೈಡರ್ 2022

ಇದೊಂದು ಥ್ರಿಲ್ಲರ್ ಸಿನಿಮಾ ಆಗಿದೆ. ಸೀರಿಯಲ್ ಕಿಲ್ಲರ್ ಒಬ್ಬನನ್ನು ಹೇಗೆ ಇನ್ವೆಸ್ಟಿಗೇಟಿವ್ ರಿಪೋರ್ಟರ್ ಹುಡುಕುತ್ತಾ ಹೋಗುತ್ತಾಳೆ, ಮುಂದೆ ಕಥೆ ಏನಾಗುತ್ತದೆ ಎನ್ನುವುದು ಚಿತ್ರದ ಮೂಲ ವಸ್ತುವಾಗಿದೆ. ಥ್ರಿಲ್ಲರ್ ಎಂದ ಕೂಡಲೇ ಗೊತ್ತಿರುವ ಕಥಾ ಹೊಂದಿರ ಆಗಿರುತ್ತದೆ ಎಂದುಕೊಳ್ಳಬೇಡಿ. ಖಂಡಿತ ಈ ಚಿತ್ರವನ್ನು ಒಮ್ಮೆ ನೋಡಿ ಈ ಇಬ್ಬರ ನಡುವೆ ಇರಾನ್ ನ ಸ್ಥಿತಿಗತಿಗಳ ಚಿತ್ರಣ ಕೂಡ ನಿಮ್ಮ ಮುಂದೆ ಮೂಡಿ ಬರಲಿದೆ. ಈ ಚಿತ್ರದ ಕ್ಯಾಮರಾ ವರ್ಕ್ ಹಾಗೂ ಲೀಡ್ ಆಕ್ಟರ್ ಗಳ ಆಕ್ಟಿಂಗ್ ಖಂಡಿತ ನಿಮ್ಮ ನೆನಪಲ್ಲಿ ಯಾವಾಗಲೂ ಇರುತ್ತದೆ.

ದಿ ವೂಲ್ಫ್ ಆಫ್ ವಾಲ್ ಸ್ಟ್ರೀಟ್ – 2013

1990ರಲ್ಲಿ ಜೋರ್ಡನ್ ಬೆಲ್ಫೋರ್ಟ್ ಎನ್ನುವ ಸ್ಟಾಕ್ ಬ್ರೋಕರ್ ಹೇಗೆ ಅಮೆರಿಕಾದ ಸ್ಟಾಕ್ ಚೇಂಜ್ ನಲ್ಲಿ ಸೆಕ್ಯೂರಿಟಿ ಫ್ರಾಡ್ಗಳನ್ನು ಮಾಡಿದ ಎನ್ನುವ ಬಗ್ಗೆ ಚಿತ್ರ ಇದಾಗಿದೆ. ಜೋರ್ಡನ್ ಬೆಲ್ಫೋರ್ಟ್ ಅವರ ಪಾತ್ರದಲ್ಲಿ ಲಿಯೋನಾರ್ಡೋ ಡಿ ಕಾಪ್ರಿಯೋ ಮನೋಜ್ಞ ಅಭಿನಯ ಮಾಡಿದ್ದಾರೆ. ಇದು ಕೇವಲ ಜೋರ್ಡನ್ ಬೆಲ್ಫೋರ್ಟ್ ಅವರ ಕಥೆಯಾಗಿರದೆ 1990ರ ಸುಮಾರಿನಲ್ಲಿ ಜನರ ಅತಿ ಆಸೆಯ ಬಗೆಗಿನ ಚಿತ್ರವೂ ಹೌದು. ಸ್ಟಾಕ್ ಮಾರ್ಕೆಟ್ ನ ಬಗ್ಗೆ ತಿಳಿದಿಲ್ಲದಿದ್ದರೂ ಹೇಗೆ ಜನ ಮೋಸ ಮಾಡುತ್ತಾರೆ ಎನ್ನುವುದನ್ನು ನೋಡಲು ಒಮ್ಮೆ ಈ ಚಿತ್ರವನ್ನು ನೀವು ನೋಡಲೇಬೇಕು.

ದ ಸೋಷಿಯಲ್ ನೆಟ್ವರ್ಕ್ – 2010

ಹೆಸರೇ ಹೇಳುವಂತೆ ಇದು ಮಾರ್ಕ್ ಝಕರ್ಬರ್ಗ್ ಅವರ ಕಥೆಯಾಗಿದೆ. ಹೇಗೆ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ಮಾಡಬೇಕು ಎನ್ನುವ ಯೋಚನೆ ಅವರಲ್ಲಿ ಬಂತು, ಇದನ್ನ ಹೇಗೆ ಆರಂಭಿಸಿದರು ಹಾಗೂ ಆರಂಭದಲ್ಲಿ ಯಾವೆಲ್ಲ ಸಮಸ್ಯೆಗಳನ್ನು ಇವರು ಎದುರಿಸಿದರು ಎಂದು ವಿವರಿಸುವ ಚಿತ್ರ ಇದಾಗಿದೆ. ಇಂದು ಸೋಶಿಯಲ್ ನೆಟ್ವರ್ಕ್ ಇಂದು ಬಹಳ ಗಟ್ಟಿಯಾದ ಮಾಧ್ಯಮ ಆಗಿದೆ ಆದರೆ ಇದರ ಆರಂಭ ಹೇಗಾಯಿತು ಎನ್ನುವ ಕುತೂಹಲ ನಿಮ್ಮಲ್ಲಿ ಇರುವುದು ಸಹಜ ಹಾಗಿದ್ದರೆ ಒಮ್ಮೆ ಚಿತ್ರ ನೋಡಿ.

ದಿ ಟ್ರೈಲ್ ಆಫ್ ದಿ ಚಿಕಾಗೊ 7 – 2020

ಇದೊಂದು ಕೋರ್ಟ್ ರೂಮ್ ಡ್ರಾಮಾ ಆಗಿದ್ದು ಏಳು ಜನರನ್ನು 1968 ರ ವಿಯೆಟ್ನಾಂ ಯುದ್ಧದ ಬಗೆಗಿನ ಪ್ರತಿಭಟನೆಗಳಲ್ಲಿ ಹೇಗೆ ಬಂಧಿಸುತ್ತಾರೆ ಮತ್ತು ಮುಂದೆ ಏನಾಗುತ್ತದೆ ಎನ್ನುವ ಬಗೆಗಿನ ಚಿತ್ರ ಇದಾಗಿದೆ. ಪ್ರತಿಭಟನೆ ಮಾಡುವುದು ಹೇಗೆ ನಮ್ಮ ಮೂಲಭೂತ ಹಕ್ಕು ಎನ್ನುವುದನ್ನು ಈ ಚಿತ್ರ ಹೇಳಿಕೊಡುತ್ತದೆ. ಇದರಲ್ಲಿ ಬರುವ ಎಲ್ಲಾ ಕಲಾವಿದರ ಅಭಿನಯ ಕೂಡ ಅತ್ಯುತ್ತಮ ದರ್ಜೆಯದ್ದಾಗಿದೆ.

ನಿಮ್ಮ ಅಚ್ಚುಮೆಚ್ಚಿನ ನೈಜ ಘಟನೆಯಾಧಾರಿತ ಚಿತ್ರ ನಮ್ಮ ಪಟ್ಟಿಯಲ್ಲಿ ಇದೆಯೇ (True Strories on Netflix) ಇದ್ದರೆ ಯಾವುದು ಮತ್ತು ಇಲ್ಲ ಎಂದಾದರೆ ಆ ಚಿತ್ರ ಯಾವುದು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

 

Exit mobile version