ಹಂಸಕ್ಷೀರ ನ್ಯೂಸ್

Best LIC Policy 2024 – ಹೊಸ ವರ್ಷದ ಹೂಡಿಕೆಗೆ ಉತ್ತಮ ಎಲ್.ಐ.ಸಿ ಪ್ಲಾನ್ ಗಳು – Invest Now

Best LIC Policy 2024 – ಹೊಸ ವರ್ಷದ ಹೂಡಿಕೆಗೆ ಉತ್ತಮ ಎಲ್.ಐ.ಸಿ ಪ್ಲಾನ್ ಗಳು – Invest Now

ಬದುಕಿನಲ್ಲಿ ಎಷ್ಟೇ ಪ್ಲಾನಿಂಗ್ ಮಾಡಿದರು ಅನಿಶ್ಚಿತತೆ ಇದ್ದೇ ಇರುತ್ತದೆ. ಇದಕ್ಕಾಗಿ ನಾವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ. ಎನೋ ಅವಘಡ ನಡೆಯುತ್ತದೆ ಎಂದಲ್ಲ ಆದರೆ ಅಂತಹ ಪರಿಸ್ಥಿತಿಯಲ್ಲೂ ನಮ್ಮವರು ತೊಂದರೆಗೆ ಬರಬಾರದು ಎಂಬ ಕಾರಣಕ್ಕಾಗಿ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ. ಅದರಲ್ಲಿ ಲೈಫ್ ಇನ್ಶುರೆನ್ಸ್ ಕೂಡ ಒಂದು (Best LIC Policy 2024).

ಭಾರತದಲ್ಲಿ ಲೈಫ್ ಇನ್ಶುರೆನ್ಸ್ ಪಾಲಿಸಿಗಳಿಗೆ ಹೆಚ್ಚಿನ ಜನ ಆಯ್ಕೆ ಮಾಡಿಕೊಳ್ಳುವುದು ಎಲ್ಐಸಿ, ಇದು ಸರ್ಕಾರಿ ಸ್ವಾಮ್ಯದ ಉದ್ದಿಮೆ ಆಗಿರುವುದರಿಂದ ಇದರ ಮೇಲೆ ಸಹಜವಾಗಿಯೇ ಹೆಚ್ಚಿನ ನಂಬಿಕೆ ಇರುತ್ತದೆ. ಭಾರತದದ್ಯಾಂತ ಇರುವ ನೆಟ್ವರ್ಕ್, ಇದರ ಇತಿಹಾಸ ಇದಕ್ಕೆ ಹೆಚ್ಚಿನ ಜನರು ಒಲವು ತೋರುವಂತೆ ಮಾಡುತ್ತದೆ.

ಚಿಕ್ಕ ಚಿಕ್ಕ ಊರುಗಳಲ್ಲಿಯೂ, ದೊಡ್ಡ ನಗರಗಳಲ್ಲಿಯೂ ನಮಗೆ ತಿಳಿದಿರುವ ಜನರಲ್ಲಿ ಒಬ್ಬರೋ ಇಬ್ಬರು ಎಲ್ಐಸಿ ಏಜೆಂಟ್ ಗಳು ಇರುವುದು ಸಾಮಾನ್ಯ. ಅವರಿಗೊಂದು ಇವರಿಗೊಂದು ಎಂದು ಎಲ್ಲರ ಬಳಿ 3-4 ಎಲ್ಐಸಿ ಪಾಲಿಸಿಗಳಿರುವುದು ಭಾರತದಲ್ಲಿ ಸರ್ವೇಸಾಮಾನ್ಯ. ಇದು ಸುರಕ್ಷತೆ ನೀಡುವುದರ ಜೊತೆಗೆ ಉಳಿತಾಯದ ಅಭ್ಯಾಸವನ್ನು ಕೂಡ ಉತ್ತೇಜಿಸುತ್ತದೆ.

2024 ಆರಂಭವಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಆರ್ಥಿಕ ವರ್ಷವೂ ಅಂತ್ಯಗೊಳ್ಳಲಿದೆ. ಹೊಸ ವರ್ಷಕ್ಕೆ ಮಾಡಿದ ಸೇವಿಂಗ್ ರೆಸೋಲ್ಯೂಷನ್ ಗಾಗಿಯೂ ಅಥವಾ ಹಣಕಾಸು ವರ್ಷದಂತ್ಯಕ್ಕೆ ಟಾಕ್ಸ್ ಉಳಿಸಬೇಕು ಎನ್ನುವುದಕ್ಕಾಗಿಯೋ ಎಲ್ ಐ ಸಿ ಪಾಲಿಸಿ (Best LIC Policy 2024) ಮಾಡುವ ಯೋಚನೆ ನಿಮ್ಮಲ್ಲಿದೆ ಎಂದಾದರೆ ಯಾವ ಎಲ್ಐಸಿ ಪಾಲಿಸಿ ಮಾಡಬೇಕು ಎಂಬ ಪ್ರಶ್ನೆಗೆ ಕೆಲವು ಆಯ್ಕೆಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ.

 

ಪಾಲಿಸಿಯ ಹೆಸರು ಪಾಲಿಸಿಯ ವಿಧ ಪಾಲಿಸಿ ಆರಂಭಿಸುವ ಕನಿಷ್ಟ ವಯೋಮಿತಿ ಪಾಲಿಸಿ ಅವಧಿ ಕನಿಷ್ಟ ಮತ್ತು ಗರಿಷ್ಟ ಪಾಲಿಸಿ ಮೊತ್ತ
ಜೇವನ್ ಉಮಂಗ್ ಸಂಪೂರ್ಣ ಲೈಫ್ ಇನ್ಶುರೆನ್ಸ್ 90 ದಿನಗಳಿಂದ 55 ವರ್ಷಗಳು 100 ವರ್ಷಗಳು 2 ಲಕ್ಷದಿಂದ ಆರಂಭ
ಜೀವನ್ ಆನಂದ್ ಎಂಡೋಮೆಂಟ್ ಪ್ಲಾನ್ 18 ರಿಂದ 50 ವರ್ಷಗಳು 75 ವರ್ಷಗಳು 1 ಲಕ್ಷದಿಂದ ಆರಂಭ
ಟೆಕ್ ಟರ್ಮ್ ಟರ್ಮ್ ಇನ್ಶುರೆನ್ಸ್ 18 ರಿಂದ 65 ವರ್ಷಗಳು 80 ವರ್ಷಗಳು 50 ಲಕ್ಷದಿಂದ ಆರಂಭ
ನ್ಯೂ ಪೆನ್ಶನ್ ಪ್ಲಸ್ ಎಂಡೋಮೆಂಟ್ ಪ್ಲಾನ್ 90 ದಿನಗಳಿಂದ 60 ವರ್ಷಗಳು 80 ವರ್ಷಗಳು 1 ಲಕ್ಷದಿಂದ ಆರಂಭ
ಜೀವನ್ ಅಮರ್ ಟರ್ಮ್ ಇನ್ಶುರೆನ್ಸ್ 18 ರಿಂದ 65 ವರ್ಷಗಳು 80 ವರ್ಷಗಳು 25 ಲಕ್ಷದಿಂದ ಆರಂಭ
ನ್ಯೂ ಚಿಲ್ಡ್ರನ್ಸ್ ಮನಿ ಬ್ಯಾಕ್ ಮನಿ ಬ್ಯಾಕ್ 0 ರಿಂದ 12 ವರ್ಷಗಳು 25 ವರ್ಷಗಳು 1 ಲಕ್ಷದಿಂದ ಆರಂಭ
ಎಸ್ ಐ ಐ ಪಿ ಯುಲಿಪ್ 90 ದಿನಗಳಿಂದ 65 ವರ್ಷಗಳು 10 ರಿಂದ 25 ವರ್ಷಗಳು ವಾರ್ಷಿಕ ಪ್ರೀಮಿಯಂ ನ 7 ರಿಂದ 10 ಪಟ್ಟು
ನಿವೇಶ್ ಪ್ಲಸ್ ಯುಲಿಪ್ 90 ದಿನಗಳಿಂದ 70 ವರ್ಷಗಳು 85 ವರ್ಷಗಳು 1 ಲಕ್ಷದಿಂದ ಆರಂಭ
ಜೀವನ್ ಲಾಭ್ ಎಂಡೋಮೆಂಟ್ ಪ್ಲಾನ್ 18 ರಿಂದ 65 ವರ್ಷಗಳು 80 ವರ್ಷಗಳು 2 ಲಕ್ಷದಿಂದ ಆರಂಭ

 

ಎಲ್ಐಸಿ ಜೀವನ್ ಉಮಂಗ್

ಇದು ನಮ್ಮ ಸಂಪೂರ್ಣ ಆಯಸ್ಸಿಗೆ ಇರುವ ಇನ್ಶುರೆನ್ಸ್ ಪ್ಲಾನ್ ಆಗಿದ್ದು ಇನ್ಶುರೆನ್ಸ್ ಪಾಲಿಸಿದಾತನ ಮರಣದ ಸಂದರ್ಭದಲ್ಲಿ ಸಂಪೂರ್ಣ ಕುಟುಂಬಕ್ಕೆ ಆದಾಯದ ಮೂಲವನ್ನು ಒದಗಿಸುತ್ತದೆ. ಇದರಲ್ಲಿ ಡೆತ್ ಬೆನಿಫಿಟ್, ಮೆಚುರಿಟಿ ಬೆನಿಫಿಟ್ ಹಾಗೂ ಅನುವಲ್ ಸರ್ವೈವಲ್ ಬೆನಿಫಿಟ್ ಕೂಡ ಸಿಗುತ್ತದೆ. ಇದರ ಮೆಚುರಿಟಿ ವ್ಯಾಲ್ಯು ಜೊತೆಗೆ ಅಡಿಷನಲ್ ಬೋನಸ್ ಮತ್ತು ರಿವರ್ಜನರಿ ಬೋನಸ್ ಸೇರುತ್ತದೆ.

Best LIC Policy 2024

ಎಲ್ಐಸಿ ಜೀವನ್ ಆನಂದ್

ಇದು ಎಂಡೋಮೆಂಟ್ ಪ್ಲಾನ್ ಆಗಿದ್ದು ಸುರಕ್ಷತೆ ಮತ್ತು ಸೇವಿಂಗ್ಸ್ ನ ಎರಡೂ ಪ್ರಯೋಜನಗಳನ್ನು ನೀಡುತ್ತದೆ. ಪಾಲಿಸಿದಾತನ ಮರಣದ ಸಮಯದಲ್ಲಿ ಕುಟುಂಬಕ್ಕೆ ದೊಡ್ಡ ಮೊತ್ತದ ಹಣ ಸಿಗುತ್ತದೆ ಸರ್ವೈವಲ್ ಬೆನಿಫಿಟ್ ಕೂಡ ಉತ್ತಮವಾಗಿರುತ್ತದೆ. ಮೆಚುರಿಟಿ ಅಮೌಂಟ್ ನ ಜೊತೆಗೆ ಫೈನಲ್ ಬೋನಸ್ ಮತ್ತು ರಿವರ್ಜನರಿ ಬೋನಸ್ ಕೂಡ ಸೇರಿಕೊಳ್ಳುತ್ತದೆ ಈ ಪಾಲಿಸಿ ಜೊತೆಗೆ ಪಾಲಿಸಿ ಹೋಲ್ಡರ್ ರೈಡರ್ಸ್ ಪ್ಯಾಕ್ಗಳನ್ನು ಸೇರಿಸಿಕೊಳ್ಳಬಹುದು. ಇದರಲ್ಲಿ ಆಕ್ಸಿಡೆಂಟ್ ನಿಂದ ಮರಣ ಅಥವಾ ಅಂಗವಿಕಲತೆ ಉಂಟಾದಾಗ ಹೆಚ್ಚಿನ ಕವರೇಜ್ ಸಿಗುತ್ತದೆ.

ಎಲ್ಐಸಿ ಟೆಕ್ ಟರ್ಮ್

ಇದು ಆನ್ಲೈನ್ ಮೂಲಕ ಪಡೆಯಬಹುದಾದ ಟರ್ಮ್ ಇನ್ಸೂರೆನ್ಸ್ ಪ್ಲಾನ್ ಆಗಿದೆ. ಇದು ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಅವರ ಕುಟುಂಬ ಮೊದಲಿನ ಜೀವನಶೈಲಿಯನ್ನೇ ಮುಂದುವರಿಸಿಕೊಂಡು ಹೋಗಲು ಬೇಕಾಗುವಷ್ಟು ಕವರೇಜ್ ಅನ್ನು ನೀಡುತ್ತದೆ. ಯಾರ ಹೆಸರಿಗೆ ಈ ಹಣ ಸೇರಬೇಕು ಎಂದು ನಾಮಿನೇಷನ್ ಕೊಟ್ಟ ಆಧಾರದಲ್ಲಿ ಅವರ ಬಳಿ ಆ ಹಣ ಸೇರಿಕೊಳ್ಳುತ್ತದೆ. ಹೀಗೆ ಸೇರಬೇಕಾಗಿರುವ ಹಣ ಒಂದೇ ಸಲ ದೊಡ್ಡ ಮೊತ್ತವಾಗಿ ಸೇರಬೇಕೋ ಅಥವಾ ಇನ್ಟಾಲ್ಮೆಂಟ್ ಗಳಾಗಿ ಅವರ ಬಳಿ ಸೇರಬೇಕೋ ಎಂದು ಕೂಡ ಮೊದಲೇ ನಿರ್ಧರಿಸಬಹುದಾಗಿದೆ.

ಎಲ್ಐಸಿ ನ್ಯೂ ಪೆನ್ಷನ್ ಪ್ಲಸ್

ಈ ಪಾಲಿಸಿ ಒಂದು ಶಿಸ್ತಿನ ಹೂಡಿಕೆಯನ್ನು ಆರಂಭಿಸುವುದಕ್ಕೆ ಸಹಾಯ ಮಾಡುತ್ತದೆ. ರಿಟಯರ್ಡ್ ಆದರೂ ನಿರಂತರವಾಗಿ ಹಣದ ಹರಿವು ನಮ್ಮ ಬಳಿ ಇರುವಂತೆ ಈ ಪಾಲಿಸಿ ನೋಡಿಕೊಳ್ಳುತ್ತದೆ. ಈ ಅವಧಿಯಲ್ಲಿ ಪಾಲಿಸಿ ಹೋಲ್ಡರ್ ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಮ್ ಅಶೂರ್ಡ್ ಸೇರುತ್ತದೆ.

ಎಲ್ಐಸಿ ಜೀವನ್ ಅಮರ್

ಇದು ನಾನ್ ಲಿಂಕ್ಡ್ ಪ್ಲಾನ್ ಆಗಿದ್ದು ಕೇವಲ ಪ್ರೊಟೆಕ್ಷನ್ ಪ್ಲಾನ್ ಆಗಿದೆ (Best LIC Policy 2024) . ಇದರ ಪ್ರೀಮಿಯಂ ಬೆಲೆಗಳೂ ಕೂಡ ಸಾಮಾನ್ಯ ಜನರ ಕೈಗೆಟಕುವಂತಿದೆ. ಹೆಚ್ಚಿನ ಮಧ್ಯದ ವರ್ಗದ ಜನರು ಈ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಒಂದು ವೇಳೆ ಪಾಲಿಸಿ ಹೋಲ್ಡರ್ ಮರಣ ಸಂಭವಿಸಿದರೆ ಅವರ ಕುಟುಂಬದವರಿಗೆ ನೆರವಾಗಲೆಂದು ಈ ಪ್ಲಾನ್ ಅನ್ನು ರೂಪಿಸಲಾಗಿದೆ.

ಎಲ್ಐಸಿ ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್

ಎಲ್ಐಸಿ ಯ ಈ ಯೋಜನೆಯು ನಿಮ್ಮ ಮಗುವಿನ ಜೀವನದ ಬೇರೆ ಬೇರೆ ಹಂತಗಳಲ್ಲಿ ಬರುವ ಹಣಕಾಸಿನ ಪ್ಲಾನಿಂಗ್ ಅನ್ನು ಮಾಡುವುದಕ್ಕೆ ನೆರವಾಗುತ್ತದೆ. ಯಾವ ವರ್ಷದಲ್ಲಿ ಯಾವ ತರಹದ ಖರ್ಚು ಬರುತ್ತದೆ ಎಂದು ಊಹಿಸುವ ಮೂಲಕ ಹೂಡಿಕೆ ಮಾಡುವ ಯೋಜನೆಯಾಗಿದೆ. ಇದರಲ್ಲಿ ಮೂರು ಬಾರಿ 20 ಶೇಕಡಾದಷ್ಟು ಟೋಟಲ್ ಸಮ್ ಅಶೂರ್ಡ್ ನ ಮೊತ್ತ ಸಿಗುತ್ತದೆ ಹಾಗೂ ಉಳಿದ 40% ಹಣ ಬೋನಸ್ ನೊಂದಿಗೆ ಪಾಲಿಸಿ ಮುಗಿಯುವ ಸಮಯದಲ್ಲಿ ಸಿಗುತ್ತದೆ. ಪಾಲಿಸಿ ಅವಧಿಯಲ್ಲಿ ಮರಣ ಆದಲ್ಲಿ ಪೂರ್ಣ ಪ್ರಮಾಣದ ಸಮ್ ಅಶೂರ್ಡ್ ಕುಟುಂಬಕ್ಕೆ ಸಿಗುತ್ತದೆ.

ಎಲ್ಐಸಿ ಎಸ್ಐಐಪಿ

ಎಲ್ಐಸಿಯ ಈ ಯೋಜನೆಯು ಯೂನಿಟ್ ಲಿಂಕ್ಡ್ ಇನ್ಸುರೆನ್ಸ್ ಪ್ಲಾನ್ ಆಗಿದ್ದು ಹೂಡಿಕೆಯ ಜೊತೆಗೆ ಇನ್ಸೂರೆನ್ಸ್ ಲಾಭವನ್ನು ನೀಡುತ್ತದೆ. ಇದರಲ್ಲಿ ಹೂಡಿಕೆ ಮಾಡಬೇಕಾದರೆ ನಮ್ಮ ಹೂಡಿಕೆಯು ಎಲ್ಲಿ ಹೋಗಬೇಕು ಎನ್ನುವುದಕ್ಕಾಗಿ ನಾಲ್ಕು ಫಂಡ್ ಆಯ್ಕೆಗಳನ್ನು ಕೂಡ ನೀಡುತ್ತದೆ. ಈ ಪಾಲಿಸಿ ಕೂಡ ಡೆತ್ ಬೆನಿಫಿಟ್ ನೊಂದಿಗೆ ಬರುತ್ತದೆ.

ಎಲ್ಐಸಿ ನಿವೇಶ್ ಪ್ಲಸ್ ಪ್ಲಾನ್

ಎಲ್ಐಸಿಐ ಈ ಯೋಜನೆ ಯೂನಿಟ್ ಲಿಂಕ್ಡ್ ಪ್ಲಾನ್ ಆಗಿದ್ದು ಮಾರ್ಕೆಟ್ ರಿಸ್ಕ್ ಅನ್ನು ಒಳಗೊಂಡಿರುತ್ತದೆ. ಇದರಲ್ಲಿ ಫಂಡ್ ಗಳ ನಡುವೆ ಹೂಡಿಕೆಯನ್ನು ಬದಲಾಯಿಸುವ ಆಯ್ಕೆ ಇರುತ್ತದೆ. ಚಾರ್ಜಸ್ ಅತ್ಯಂತ ಕಡಿಮೆ ಇದ್ದು ಉತ್ತಮ ಮಾರ್ಕೆಟ್ ರಿಟರ್ನ್ ಸಿಗುತ್ತದೆ(Best LIC Policy 2024).

ಎಲ್ಐಸಿ ಜೀವನ್ ಲಾಭ್

ಈ ಪಾಲಿಸಿ ಉಳಿತಾಯದ ಅಭ್ಯಾಸವನ್ನು ಹೆಚ್ಚಿಸಿ ಇದರ ಜೊತೆಗೆ ಇನ್ಸೂರೆನ್ಸ್ ಕವರ್ ಕೂಡ ನೀಡುತ್ತದೆ. ಇದರಲ್ಲಿ ಕೂಡ ಉತ್ತಮವಾದ ಬೋನಸ್ ಸಿಗುತ್ತದೆ. ಇದರ ಮೇಲೆ ಸಾಲ ಸೌಲಭ್ಯದ ಆಯ್ಕೆಯು ಕೂಡ ಇದೆ. ಲಾಂಗ್ ಟರ್ಮ್ ಇನ್ವೆಸ್ಟ್ ಮಾಡಬೇಕು ಎಂದು ಪ್ಲಾನ್ ಮಾಡಿದವರಿಗೆ ಈ ಪಾಲಿಸಿ ಸೂಕ್ತವಾಗಿದೆ.

Exit mobile version