ಹಂಸಕ್ಷೀರ ನ್ಯೂಸ್

How to Invest in SIP – ಎಸ್ ಐ ಪಿ ಹೂಡಿಕೆ ಹೇಗೆ ಆರಂಭಿಸಬೇಕು

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಅಥವಾ ಎಸ್ಐಪಿ ಯಲ್ಲಿ ಹೂಡಿಕೆ ಮಾಡುವುದು ಹೇಗೆ  (How to Invest in SIP) ಎನ್ನುವುದು ಹಲವಾರು ಜನರ ಪ್ರಶ್ನೆ ಆಗಿರುತ್ತದೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಒಂದು ಸರಳವಾದ ಹೂಡಿಕೆಯ ವಿಧಾನವಾಗಿದ್ದು ಹೆಚ್ಚಿನ ದಿನ ಇನ್ವೆಸ್ಟ್ಡ್ ಆಗಿದ್ದರೆ ಉತ್ತಮ ರಿಟರ್ನ್ಸ್ ಖಂಡಿತ ಸಿಗುತ್ತದೆ.

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ತಿಳಿದುಕೊಳ್ಳುವ ಮೊದಲು ಮ್ಯೂಚುವಲ್ ಫಂಡ್ಸ್ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಮ್ಯೂಚುವಲ್ ಫಂಡ್ (Mutual Fund) ಅನ್ನು ಸರಳ ವಾಕ್ಯಗಳಲ್ಲಿ ಹೇಳುವುದಾದರೆ, ಹೂಡಿಕೆ ಮಾಡಲು ಆಸಕ್ತಿ ಇರುವ ಜನರಿಂದ ಹಣವನ್ನು ಸಂಗ್ರಹಿಸಿ ಎಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಬರುತ್ತದೆ ಎಂಬುದನ್ನು ತಿಳಿದುಕೊಂಡಿರುವ ವ್ಯಕ್ತಿ ಆ ಹಣವನ್ನು ಅಂತಹ ಜಾಗಗಳಲ್ಲಿಯೇ, ಅಂದರೆ ಈಕ್ವಿಟಿಗಳು ಬಾಂಡ್ಸ್ ಗಳು ಮನಿ ಮಾರ್ಕೆಟ್ಗಳು, ಚಿನ್ನ ಮುಂತಾದ ಕಡೆ ಇನ್ವೆಸ್ಟ್ ಮಾಡುತ್ತಾನೆ ಹಾಗೂ ಇಲ್ಲಿಂದ ಬಂದ ಲಾಭವನ್ನು ತನ್ನ ಖರ್ಚನ್ನು ತೆಗೆದು ಹೂಡಿಕೆ ಮಾಡಿದ ವ್ಯಕ್ತಿಗಳಿಗೆ ಹಿಂದಿರುಗಿಸುತ್ತಾನೆ.

 

ಫಂಡ್ ಮ್ಯಾನೇಜರ್ (Fund Manager)

ನಾವು ಹೂಡಿಕೆ ಮಾಡಿದ ಹಣವನ್ನು ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು?  ಈಗ ಎಲ್ಲಿ ಹೆಚ್ಚಿನ ರಿಟರ್ನ್ಸ್ ಬರುತ್ತಿದೆ ? ಈಕ್ವಿಟಿ ಮಾರ್ಕೆಟ್ ಎಂದಾದರೆ ಯಾವೆಲ್ಲ ಶೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಕೊಡಬಹುದು ಎಂಬುದನ್ನೆಲ್ಲ ಫಂಡ್ ಮ್ಯಾನೇಜರ್ ನೋಡಿಕೊಳ್ಳುತ್ತಾರೆ. ಎಲ್ಲಾ ಬಗೆಯ ಮಾರುಕಟ್ಟೆಯ ಬಗ್ಗೆ ಸದಾ ಕಾಲ ಎಚ್ಚರದಿಂದ ಇರಬೇಕಾಗುತ್ತದೆ.

ಒಬ್ಬ ವ್ಯಕ್ತಿಯನ್ನು ನಂಬಿ ನಾವು ಹೂಡಿಕೆ ಮಾಡುವುದಾಗಿರುವುದಿಲ್ಲ ಬದಲಾಗಿ ಹಲವಾರು ದೊಡ್ಡ ಸಂಸ್ಥೆಗಳು, ಬ್ಯಾಂಕುಗಳು ಈ ಫಂಡ್ ಮ್ಯಾನೇಜರ್ ಗಳನ್ನು ನೇಮಕ ಮಾಡಿರುತ್ತಾರೆ. ಉದಾಹರಣೆಗೆ ಎಸ್ ಬಿ ಐ, ಕೆನರಾ, ಐಸಿಐಸಿಐ, ಎಚ್‌ ಡಿ ಎಫ್ ಸಿ ಮುಂತಾದ ಬ್ಯಾಂಕುಗಳು ತಮ್ಮ ಮ್ಯೂಚುವಲ್ ಫಂಡ್ ವಿಭಾಗಗಳನ್ನು ಹೊಂದಿರುತ್ತಾರೆ. ಅಲ್ಲಿರುವ ಫಂಡ್ ಮ್ಯಾನೇಜರ್ ಸಂಗ್ರಹ ಆದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುತ್ತಾರೆ.

ಎಸ್ ಐ ಪಿ – How to Invest in SIP

ಎಸ್ಐಪಿ ಅಥವಾ ಸಿಸ್ಟಮ್ಯಾಟಿಕ್ ಇನ್ವೆಸ್ಟ್ ಮೆಂಟ್ ಪ್ಲಾನ್ ಯೋಜನೆಗಳಲ್ಲಿ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಇಂತಹ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡುವುದಾಗಿರುತ್ತದೆ. ಅಷ್ಟು ಹಣವನ್ನು ಪ್ರತಿ ತಿಂಗಳ ನಿಗದಿತ ತಾರೀಕಿನಂದು ನಾವು ಎಸ್ಐಪಿ ಮೂಲಕ ಹೂಡಿಕೆ ಮಾಡಬಹುದು. ನಮ್ಮ ಯಾವುದೋ ಒಂದು ಹಣಕಾಸಿನ ಗುರಿ ಇದೆ ಎಂದಾದರೆ ಅದನ್ನು ಎಸ್ಐಪಿ ಮುಖಾಂತರ ಈಡೇರಿಸುವ ಕೊಳ್ಳಬಹುದು.

ರಿಸ್ಕ್ ಫಾಕ್ಟರ್ ಅನ್ನು ಗಮನಿಸಿ ಹೂಡಿಕೆ ಮಾಡಿ

ಎಸ್ ಐ ಪಿ ಪ್ಲಾನ್ ಗಳಲ್ಲಿ ಮುಖ್ಯವಾಗಿ ನಾವು ಗಮನಿಸಬೇಕಾದ ವಿಷಯ ನಾವು ಹೂಡಿಕೆ ಮಾಡುವ ಹಣ ಯಾವ ಕ್ಷೇತ್ರದಲ್ಲಿ ಹೂಡಿಕೆಯಾಗುತ್ತಿದೆ ಎನ್ನುವುದಾಗಿದೆ. ಅದರ ರಿಸ್ಕ್ ಫ್ಯಾಕ್ಟರ್ ಎಷ್ಟು ಎಂದು ತಿಳಿದುಕೊಳ್ಳಬೇಕು. ತೀರಾ ಹೆಚ್ಚಿನ ರಿಟರ್ನ್ ಬರೆದಿದ್ದರು ಪರವಾಗಿಲ್ಲ ಆದರೆ ನಮಗೆ ಯಾವಾಗ ಬೇಕಾಗುತ್ತದೆಯೋ ಅಂತಹ ಸಮಯದಲ್ಲಿ ಒಂದು ಒಳ್ಳೆಯ ರಿಟರ್ನ್ ಜೊತೆಗೆ ಹಣ ತೆಗೆಯಬೇಕು ಎಂದಾದರೆ ಲೋ ರಿಸ್ಕ್ ಅಥವಾ ಮೀಡಿಯಂ ರಿಸ್ಕ್ ಫಾಕ್ಟರ್ ಇರುವ ಫಂಡ್ ಗಳ ಮೇಲೆ ಹೂಡಿಕೆ ಮಾಡಬಹುದು.

ಇದೇ ರೀತಿ ನಾವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದಾದರೆ ಹೈ ರಿಸ್ಕ್ ಮ್ಯೂಚುವಲ್ ಫಂಡ್ ಗಳ ಮೇಲೆ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮಾಡಿ ಒಳ್ಳೆಯ ರಿಟರ್ನ್ ಬಂದಾಗ ಹಣವನ್ನು ವಾಪಸ್ಸು ತೆಗೆದುಕೊಳ್ಳೋಣ ಎನ್ನುವ ಯೋಜನೆ ಇದ್ದರೆ ಉತ್ತಮ ರಿಟರ್ನ್ ನೊಂದಿಗೆ ನಮ್ಮ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳಬಹುದು.

ನಮ್ಮ ಹಣ ಎಲ್ಲಿ ಹೂಡಿಕೆ ಆಗುತ್ತದೆ ತಿಳಿದುಕೊಳ್ಳಿ (How to Invest in SIP)

ನಾವು ಮಾರ್ಕೆಟ್ ಲಿಂಕ್ಡ್ (Market Linked Funds) ಮ್ಯೂಚುವಲ್ ಫಂಡ್ ಗಳು ಬೇಕೋ ಬೇಡವೋ ಎನ್ನುವುದನ್ನು ಕೂಡ ನಿರ್ಧರಿಸಬಹುದು. ಮಾರ್ಕೆಟ್ ಲಿಂಕ್ಡ್ ಮ್ಯೂಚುವಲ್ ಫಂಡುಗಳು ಷೇರು ಮಾರುಕಟ್ಟೆಯ ಏರಿಳಿತದಿಂದ ಹೆಚ್ಚಿನ ಪ್ರಭಾವಕ್ಕೆ ಒಳಗಾಗುತ್ತದೆ. ಅಂತಹ ರಿಸ್ಕ್ ಬೇಡ ಎಂದಾದರೆ ಬಾಂಡ್ ಗಳ ಮೇಲೆ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಇಲ್ಲಿ ರಿಟರ್ನ್ಸ್ ಸ್ವಲ್ಪ ಕಡಿಮೆ ಇದ್ದರೂ ಖಚಿತ ಇರುತ್ತದೆ.

ಹಣ ಡೆಬಿಟ್ ಆಗುವ ದಿನಾಂಕ ನಿರ್ಧರಿಸಿ

ಯಾವ ದಿನ ನಿಮ್ಮ ಅಕೌಂಟಿನಿಂದ ಹಣ ಹೂಡಿಕೆಯಾಗಬೇಕು ಎನ್ನುವುದನ್ನು ಕೂಡ ನೀವು ಪೂರ್ವ ನಿರ್ಧಾರ ಮಾಡಬಹುದು. ನೀವು ನಿಗದಿ ಮಾಡಿದ ದಿನ ನಿರ್ಧಾರಿತ ಮೊತ್ತ ನಿಮ್ಮ ಖಾತೆಯಿಂದ ಡೆಬಿಟ್ ಆಗಿ ಮ್ಯೂಚುವಲ್ ಫಂಡ್ ಮೇಲೆ ಹೂಡಿಕೆ ಆಗಿರುತ್ತದೆ.

ಎಸ್ಐಪಿ ಇನ್ವೆಸ್ಟ್ ಮೆಂಟ್ ಮಾರ್ಕೆಟ್ ಲಿಂಕ್ಡ್ ಮ್ಯೂಚುಯಲ್ ಫಂಡ್ ಗಳ ಮೇಲೆ ಇದ್ದರೆ ಷೇರು ಮಾರ್ಕೆಟ್ ಅನ್ನು ಸ್ವಲ್ಪ ಗಮನಿಸಬೇಕಾಗುತ್ತದೆ. ಮಾರ್ಕೆಟ್ ತೀರ ಹೈ ಲೆವೆಲ್ ಗಳಲ್ಲಿ ಇದ್ದರೆ ಹಾಗೂ ನಮ್ಮ ಇನ್ವೆಸ್ಟ್ ಮೆಂಟ್ ಗೆ ಉತ್ತಮ ರಿಟರ್ನ್ ಬಂದಿದ್ದರೆ ಒಮ್ಮೆ ಹಣವನ್ನು ಹಿಂದೆ ಪಡೆಯಬಹುದು. ಆದರೆ ಬಹಳ ಹೆಚ್ಚಿನ ವರ್ಷ ಮ್ಯೂಚುವಲ್ ಫಂಡ್ ಗಳ ಮೇಲೆ ಇನ್ವೆಸ್ಟ್ ಮಾಡಿದವರಿಗೆ ಬಹಳ ಆಕರ್ಷಕವಾದ ರಿಟರ್ನ್ಸ್ ಗಳು ಬಂದಿರುತ್ತದೆ. ಇದೇ ಕಾರಣಕ್ಕೆ ಸೇವಿಂಗ್ಸ್ ಮತ್ತು ಹೂಡಿಕೆ ಬೇಗನೇ ಆರಂಭಿಸಿ ಎನ್ನುತ್ತಾರೆ (Start Investing Early).

ಒಂದಕ್ಕಿಂತ ಹೆಚ್ಚು ಮ್ಯೂಚುವಲ್ ಫಂಡುಗಳ ಮೇಲೆ ಇನ್ವೆಸ್ಟ್ ಮಾಡುವ ಯೋಚನೆ ಇದ್ದರೆ ಹಣವನ್ನು ಒಂದೇ ಕಡೆ ಹೂಡಿಕೆ ಮಾಡಬೇಡಿ. ಕೇವಲ ಬಾಂಡ್ ಗಳ ಮೇಲೆ ಅಥವಾ ಕೇವಲ ಷೇರು ಮಾರುಕಟ್ಟೆ ಆಧಾರಿತ ಫಂಡ್ ಗಳ ಮೇಲೆ ಇನ್ವೆಸ್ಟ್ ಮಾಡಬೇಡಿ. ಎಲ್ಲಾ ತರಹದ ಫಂಡ್ ಗಳ ಮೇಲೆ ಸ್ವಲ್ಪ ಪ್ರಮಾಣದ ಹೂಡಿಕೆ ಮಾಡಿ.

 

ಬೇಕಾಗುವ ದಾಖಲೆಗಳು (How to Invest in SIP)

ಎಸ್ ಐ ಪಿ ಆರಂಭಿಸಬೇಕಾದರೆ ಬೇಕಾಗುವ ದಾಖಲೆಗಳು ಸರಳವಾಗಿದ್ದು ಅವುಗಳೆಂದರೆ ಪಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಚೆಕ್ ಪುಸ್ತಕ ಹಾಗೂ ನಿಮ್ಮ ಭಾವಚಿತ್ರ. ಈ ದಾಖಲೆಗಳನ್ನು ತಯಾರು ಮಾಡಿಕೊಂಡು ಮನೆಯಿಂದಲೇ ನಿಮಗೆ ಬೇಕಾದ ಬ್ಯಾಂಕ್ ಅಥವಾ ಕಂಪನಿಯ ಮ್ಯೂಚುವಲ್ ಫಂಡ್ ಅನ್ನು ಆರಂಭಿಸಬಹುದು.

ಮ್ಯೂಚುವಲ್ ಫಂಡ್ ನ ಮೇಲೆ ಹೂಡಿಕೆ ಮಾಡಬೇಕು ಎಂದು ನಿರ್ಧಾರ ಮಾಡಿ ಆಗಿದೆ ಆದರೆ ಎಸ್ ಐ ಪಿ ಉತ್ತಮವೋ ಅಥವಾ ಒಂದೇ ಬಾರಿಗೆ ದೊಡ್ಡ ಹಣ ಹೂಡಿಕೆ ಮಾಡುವುದು ಉತ್ತಮವೋ ಎಂಬ ಗೊಂದಲದಲ್ಲಿದ್ದರೆ ಎಸ್ಐಪಿ ಮತ್ತು ದೊಡ್ಡ ಹೂಡಿಕೆಯ ಪ್ರಯೋಜನಗಳು ಈ ಕೆಳಗಿನಂತಿವೆ.

ಎಸ್ ಐ ಪಿ

ಒಂದೇ ಬಾರಿ ದೊಡ್ಡ ಹೂಡಿಕೆ (Lumpsum Investment)

Exit mobile version