ಮೊದಲನೇ ಮಹಡಿ ಮೇಲಿದ್ದ ಮಗನ ಬಳಿ ತಂದೆ ಬಂದು ಮಾತನಾಡುತ್ತಾ ಕೂರುತ್ತಾರೆ

ತನ್ನ ಹಳೆಯ ದಿನಗಳನ್ನು ನೆನೆದು ಮಾತನಾಡಿ ಟೆರೇಸಿಗೆ ಹೋಗುತ್ತಾರೆ

ಸ್ವಲ್ಪ ಹೊತ್ತಲ್ಲಿ ಕೆಳಗಿಂದ ಬಾಗಿಲು ತೆಗೆದು ಯಾರೋ ಒಳಗೆ ಬಂದಂತೆ ಸದ್ದು ಕೇಳುತ್ತದೆ

ತಂದೆಯ ದನಿಯಲ್ಲಿ ಎಲ್ಲಿದ್ದಿ ಮಗನೆ ನೀನು ಬೇಕು ಎಂದು ಹಟ ಮಾಡಿದ ಪುಸ್ತಕ ತಂದಿದ್ದೇನೆ ಎನ್ನುತ್ತದೆ ಆ ಧ್ವನಿ

ಮಗನಿಗೆ ಆತಂಕ ಮನೆಗೆ ಅಪ್ಪ ಈಗ ಬಂದರು ಎಂದಾದರೆ ಇಷ್ಟು ಹೊತ್ತು ಅಲ್ಲಿ ಕುಳಿತಿದ್ದುದ್ದು ಯಾರು ?

ಮಗ ಓಡುತ್ತಾ ರೂಮಿನಿಂದ ಹೊರಗೆ ಬಂದಾಗ ಅಮ್ಮ ಕೈಹಿಡಿದು ನಿಲ್ಲಿಸಿ ಹೇಳುತ್ತಾರೆ ನನಗೂ ಧ್ವನಿ ಕೇಳಿತು ಆದರೆ ಅಪ್ಪ ಇನ್ನೂ ಆಫೀಸಿನಲ್ಲಿದ್ದಾರೆ