ಸ್ಮಾರ್ಟ್ ಫೋನ್ ಗಳು ಎಷ್ಟೇ ಅಪ್ಡೇಡ್ ಆದರೂ ಕಡಿಮೆಯೇ. ಪ್ರತಿ ಬ್ರಾಂಡ್ ನ ಪ್ರತೀ ಹೊಸ ಫೋನ್ (Upcoming Mobile Phones) ಪ್ರತೀ ಅಪ್ಡೇಟ್ ನೊಂದಿಗೆ ಉತ್ತಮವಾಗುತ್ತಾ ಹೋಗುತ್ತದೆ. ಬಳಕೆದಾರರೂ ಆಷ್ಟೇ ಒಂದು ವರ್ಷವಾಗುತ್ತಿದ್ದಂತೆಯೇ ಮೊಬೈಲ್ ಬದಲಾಯಿಸಲು ಸಿದ್ಧರಾಗಿರುತ್ತಾರೆ. ಕೆಲವು ಬ್ರಾಂಡ್ ನ ಮೊಬೈಲ್ ಗಳು ವರ್ಷಕ್ಕೊಮ್ಮೆ ಅಷ್ಟೇ ಲಾಂಚ್ ಆಗುತ್ತವೆ ಮತ್ತು ಈ ಇವೆಂಟ್ ಗೆ ಜನರು ಕಾತರದಿಂದ ಕಾಯುತ್ತಿರುತ್ತಾರೆ.
ಹೊಸ ವರ್ಷ ಆರಂಭವಾಗಿದೆ ಈ ವರ್ಷದ ಮೊದಲ ಕೆಲವು ಮೊಬೈಲ್ ಫೋನ್ ಲಾಂಚ್ ಗೆ ಸಿದ್ಧವಾಗಿದೆ. ಇದರಲ್ಲಿ ಹಲವಾರು ಮೊಬೈಲ್ ಗಳಿಗೆ ಜನರು ಈಗಾಗಲೇ ಕಾಯುತ್ತಿದ್ದಾರೆ. ನಿಮ್ಮ ಮುಂದಿನ ಫೋನ್ ಯಾವುದಾಗಿರಬೇಕು ಯಾವೆಲ್ಲಾ ಆಪ್ಶನ್ಸ್ ಗಳು ಇರಬೇಕು, ಕ್ಯಾಮೆರಾ ಹೇಗಿರಬೇಕು ಮತ್ತು ಬ್ಯಾಟರಿ ಪರ್ಫಾರ್ಮೆನ್ಸ್ ಹೇಗಿರಬೇಕು ಎಂಬ ವಿವರಗಳನ್ನು ಒಂದೇ ಕಡೆ ನೋಡಬೇಕಾದರೆ ಇಲ್ಲಿದೆ ವಿವರಗಳು.
ಓನ್ ಪ್ಲಸ್ 12
ಒನ್ ಪ್ಲಸ್ ಮೊಬೈಲ್ ಗಳು ಭಾರತದಲ್ಲಿ ಬಹಳ ಪ್ರಸಿದ್ಧವಾಗಿವೆ. ಗ್ರಾಹಕರು ಕೊಡುವ ಬೆಲೆಗಳಿಗೆ ಉತ್ತಮ ವಾಲ್ಯೂ ಕೊಡುವ ಬ್ರಾಂಡ್ ಎಂದು ಹೆಸರು ಮಾಡಿದೆ. ಒನ್ ಪ್ಲಸ್ ಬಹಳ ಮೊಬೈಲ್ ಗಳನ್ನು ಲಾಂಚ್ ಮಾಡದೇ ಇದ್ದರೂ ವರ್ಷಕ್ಕೊಮ್ಮೆ ತಮ್ಮ ಫ್ಲಾಗ್ ಷಿಪ್ ಗಳನ್ನು ಅಪ್ಡೇಟ್ ಮಾಡುತ್ತಾ ಇರುತ್ತವೆ.
ಒನ್ ಪ್ಲಸ್ 12 ಈಗ ಲಾಂಚ್ ಗೆ ಸಿದ್ಧವಾಗಿದೆ. ಒನ್ ಪ್ಲನ್ 8 ರ ನಂತರ ಅಷ್ಟೊಂದು ಖ್ಯಾತಿ ಪಡೆಯದ ನಂತರದ ವರ್ಷನ್ ಗಳಿಂದ ಒನ್ ಪ್ಲನ್ ಬ್ರಾಂಡ್ ವಾಲ್ಯೂ ಸ್ವಲ್ಪ ಕಡಿಮೆ ಆದಂತಿತ್ತು ಆದರೆ ಕಳೆದ ಬಾರಿಯ ಒನ್ ಪ್ಲಸ್ 11 ಈ ಹೆಸರನ್ನು ಅಳಿಸಿ ಹಾಕಿತ್ತು. ಈಗ ಒನ್ ಪ್ಲಸ್ ಹೊಸ ಪೋನ್ ಒನ್ ಪ್ಲಸ್ 12 ರೊಂದಿಗೆ ಬರುತ್ತಿದೆ. ಇದರ ಜೊತೆಗೆ 12 R ಮತ್ತು 12 ಪ್ರೋ ಕೂಡ ಲಾಂಚ್ ಆಗುತ್ತಿವೆ (Upcoming Mobile Phones).
ಒನ್ ಪ್ಲಸ್ 12 ಫ್ಲಾಗ್ ಷಿಪ್ ಸ್ನಾಪ್ ಡ್ರಾಗನ್ 8 ಜೆನ್ 3 ನೊಂದಿಗೆ ಬರಲಿದೆ. 6.82 ಇಂಚಿನ ಅಮೇಲೆಡ್ ಡಿಸ್ಪ್ಲೆಯೊಂದಿಗೆ ಬರಲಿದೆ. ಹಿಂಬದಿ ಕ್ಯಾಮೆರಾದಲ್ಲಿ ಟ್ರಿಪಲ್ ಸೆಟ್ ಅಪ್ ಇದೆ. 50+48+64 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆಟ್ ಅಪ್ ಉತ್ತಮ ಫೋಟೋಗಳ ಖಾತರಿಯನ್ನು ನೀಡುತ್ತದೆ. 32 ಮೆಗಾ ಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಕೂಡ ಈಗಿನ ಸೋಷಿಯಲ್ ಮೀಡಿಯಾ ಟ್ರೆಂಡ್ ಗಳಿಗೆ ಹೇಳಿ ಮಾಡಿಸಿದಂತಿದೆ. 5400 ಎಮ್ ಎ ಎಚ್ ಬ್ಯಾಟರಿ ಒಂದು ದಿನದ ಹೆವಿ ಬಳಕೆಗೆ ಹೇಳಿ ಮಾಡಿಸಿದಂತಿದೆ. ಬೆಲೆಗಳು 65,000 ಆಸುಪಾಸು ಇರಲಿದೆ ಎಂದು ಊಹಿಸಲಾಗಿದೆ.
ರಿಯಲ್ ಮಿ ಜಿ. ಟಿ. 5 ಪ್ರೊ
ರಿಯಲ್ ಮಿ ಯ ಜಿ.ಟಿ ಸಿರೀಸ್ ಫೋನುಗಳು ಉತ್ತಮ ಪರ್ಫಾಮೆನ್ಸ್ ಗೆ ಹೆಸರುವಾಸಿಯಾಗಿವೆ. 6.78 ಇಂಚಿನ ಅಮೋಲೆಡ್ ಡಿಸ್ಪ್ಲೆ ಇದ್ದು ಉತ್ತಮ ವೀವಿಂಗ್ ಆಂಗಲ್ ಅನ್ನು ಹೊಂದಲಿದೆ. ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಇದ್ದು ಟಾಪ್ ನಾಚ್ ಪರ್ಫಾಮೆನ್ಸ್ ಖಂಡಿತ. 50+8+64 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ ಸೆಟ್ ಅಪ್ ಕೂಡ ಹೈ ಕ್ವಾಲಿಟಿ ಆಗಿದೆ. 32 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ ಉತ್ತಮ ವಾಗಿರಲಿದೆ. 5400 ಎಮ್ ಎ ಎಚ್ ಬ್ಯಾಟರಿ ಒಂದು ದಿನದ ಹೆವಿ ಬಳಕೆಗೆ ಹೇಳಿ ಮಾಡಿಸಿದಂತಿದೆ. ರಿಯಲ್ ಮಿ ಜಿ. ಟಿ. 5 ಪ್ರೊ ದ ಬೆಲೆಗಳು 40,000 ಆಸುಪಾಸು ಇರಲಿದೆ ಎನ್ನಲಾಗಿದೆ.
ಕ್ಸಿಯೊಮಿ 14 ಪ್ರೊ
ಕ್ಸಿಯೊಮಿಯ ಫ್ಲಾಗ್ ಷಿಪ್ ಫೋನ್ ಈಗ ಲಾಂಚ್ ಆಗಲು ಸಿದ್ಧವಾಗಿದೆ. ಸ್ನಾಪ್ ಡ್ರಾಗನ್ 8 ಜೆನ್ 3 ನೊಂದಿಗೆ ಬರಲಿದೆ. 6.73 ಇಂಚಿನ ಡಿಸ್ಪ್ಲೆ ಉತ್ತಮ ವೀವಿಂಗ್ ಎಕ್ಸ್ ಪೀರಿಯೆನ್ಸ್ ಅನ್ನು ನೀಡುತ್ತದೆ.
ನುಬಿಯಾ ರೆಡ್ ಮ್ಯಾಜಿಕ್ 5
ನುಬಿಯಾದ ಫ್ಲಾಗ್ ಷಿಪ್ ಫೋನ್ ಲಾಂಚ್ ಆಗುತ್ತಿದೆ. ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಉತ್ತಮ ಪರ್ಫಾಮೆನ್ಸ್ ನ ಗ್ಯಾರಂಟಿಯನ್ನು ನೀಡುತ್ತದೆ. 6.8 ಇಂಚಿನ ಡಿಸ್ಪ್ಲೆ ಬಹಳ ಉತ್ತಮವಾಗಿದೆ. 8 ಜಿಬಿ ರಾಮ್ ಆಯ್ಕೆಯೊಂದಿಗೆ ಈ ಮೊಬೈಲ್ ಲಾಂಚ್ ಆಗುತ್ತಿದೆ. 50+50+2 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ ಆಕರ್ಷಣೆ ಆಗಿದೆ. ಮುಂದಿನೆ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಆಗಿದ್ದರೂ ಉತ್ತಮ ಕ್ವಾಲಿಟಿಯ ಫೋಟೋಗಳನ್ನು ಕ್ಲಿಕ್ಕಿಸುತ್ತಿದೆ.
ಸೆಗ್ಮೆಂಟ್ ನಲ್ಲೆ ಹೆಚ್ಚು 6500 ಎಮ್ ಎ ಎಚ್ ಬ್ಯಾಟರಿಯನ್ನು ಈ ಪೊಬೈಲ್ ಪಡೆಯಲಿದೆ. 51,000 ರೂಪಾಯಿಯ ಆಸುಪಾಸು ಬೆಲೆಗಳನ್ನು ಊಹಿಸಲಾಗಿದೆ.
ಐಕ್ಯೂ 12 ಪ್ರೊ
ಇತ್ತೀಚಿನ ಐಕ್ಯೂ ಫೋನುಗಳು ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಪಡೆಯುತ್ತಿವೆ. ಫ್ಲಾಗ್ ಷಿಪ್ ಸೀರೀಸ್ ಮತ್ತು ಅಫೋರ್ಡೇಬಲ್ ಸೀರೀಸ್ ನಲ್ಲಿ ಐಕ್ಯೂ ಮೊಬೈಲ್ ಗಳನ್ನು ಲಾಂಚ್ ಮಾಡುತ್ತಿದೆ. ಈಗ ಫ್ಲಾಗ್ ಷಿಪ್ ಸೀರೀಸ್ ನ ಐಕ್ಯೂ 12 ಪ್ರೊ ಲಾಂಚ್ ಆಗುತ್ತಿದೆ. 6.78 ಡಿಸ್ಪ್ಲೆ ಇರಲಿದೆ. ಸ್ನಾಪ್ ಡ್ರಾಗನ್ 8 ಜೆನ್ 3 ಪ್ರೊಸೆಸರ್ ಇರಲಿದೆ. 16 ಜಿಬಿ ರಾಮ್ ಆಯ್ಕೆ ಇರಲಿದೆ. 50+50+64 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆಟ್ ಅಪ್ ಉತ್ತಮ ಕ್ಲಿಕ್ ಗಳಿಗೆ ಖಾತರಿಯಾಗಿದೆ. 16 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ. 5100 ಎಮ್ ಎ ಎಚ್ ಬ್ಯಾಟರಿ ಇಡೀ ದಿನದ ಬ್ಯಾಟರಿ ಬೇಡಿಕೆಯನ್ನು ಪೂರೈಸಲಿದೆ. 59,000 ಆಸುಪಾಸಿನ ಬೆಲೆಯಲಿ ಈ ಮೊಬೈಲ್ ಲಾಂಚ್ ಆಗಲಿದೆ (Upcoming Mobile Phones).
ವಿವೋ ಎಸ್ 18
ಸ್ನಾಪ್ ಡ್ರಾಗನ್ 7 ಜೆನ್ 3 ಪ್ರೊಸೆಸರ್ ವಿವೋ ಎಸ್ 18 ನಲ್ಲಿ ಇರಲಿದೆ. 6.81 ಇಂಚಿನ ದೊಡ್ಡ ಡಿಸ್ಲ್ಪೆ ಮೊಬೈಲ್ ನಲ್ಲಿ ವೀಡಿಯೋ ವೀವಿಂಗ್ ಅನ್ನು ಉತ್ತಮವಾಗಿಸಲಿದೆ. 50+8+2 ಮೆಗಾ ಪಿಕ್ಸೆಲ್ ಹಿಂಬದಿ ಮತ್ತು 50 ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರಲಿದೆ. 5000 ಎಮ್ ಎ ಎಚ್ ಬ್ಯಾಟರಿ ಫಾಸ್ಟ್ ಚಾರ್ಜ್ ನೊಂದಿಗೆ ಬರಲಿದ್ದು ದಿನವಿಡಿ ಮೊಬೈಲ್ ಬಳಕೆಯನ್ನು ಸುಲಭವಾಗಿಸಲಿದೆ. ಇದರ ಬೆಲೆ 28,000 ರೂಪಾಯಿಯ ಆಸು ಪಾಸು ಇರಲಿದೆ.