ರಕ್ತ ಪರೀಕ್ಷೆ (Top 5 Blood Tests) ಮಾಡುವುದರ ಮೂಲಕ ನಮ್ಮ ಆರೋಗ್ಯ ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡಲು ಬಹಳ ಸುಲಭ ಆಗುತ್ತದೆ. ನಮ್ಮ ದೇಹದ ಒಟ್ಟು ಆರೋಗ್ಯ ರಕ್ತ ಪರೀಕ್ಷೆಯ ಮೂಲಕವೇ ತಿಳಿಯದೆ ಇದ್ದರೂ ಕೆಲವು ರಕ್ತ ಪರೀಕ್ಷೆಗಳನ್ನು ನಿಯಮಿತವಾಗಿ ಮಾಡಿಸುವುದರಲ್ಲಿ ಹಲವು ವಿಷಯಗಳಲ್ಲಿ ನಮ್ಮ ದೇಹ ಹೇಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿ ಸಿಗುತ್ತಾ ಇರುತ್ತದೆ.
ಕೇವಲ ರಕ್ತ ಪರೀಕ್ಷೆ (Top 5 Blood Tests) ಅಷ್ಟೇ ಅಲ್ಲ. ವರ್ಷಕ್ಕೆ ಒಮ್ಮೆ ನಮ್ಮ ದೇಹದ ಒಟ್ಟು ಪರೀಕ್ಷೆಗಳನ್ನು ಮಾಡಿಸುವುದು ಕೂಡ ಉತ್ತಮ. ನಿಮ್ಮ ಕುಟುಂಬ ವೈದ್ಯರ ಸಲಹೆಯ ಮೇರೆಗೆ ಯಾವೆಲ್ಲ ಅಂಶಗಳನ್ನು ಪರೀಕ್ಷೆ ಮಾಡಿಸಬೇಕು ಎನ್ನುವುದನ್ನು ತಿಳಿದುಕೊಂಡು ಅಂತಹ ಪರೀಕ್ಷೆಗಳನ್ನು ಮಾಡಿಸುತ್ತಾ ಇದ್ದಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿರುತ್ತದೆ. ಯಾವುದಾದರೂ ಒಂದು ವಿಷಯ ಸರಿಯಾಗಿಲ್ಲ ಎಂದಾದಲ್ಲಿ ಕೂಡಲೇ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬಹುದು.
ಪ್ರಿವೆನ್ಶನ್ ಇಸ್ ಬೆಟ್ಟರ್ ದೆನ್ ಕ್ಯೂರ್ (ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ) ಎನ್ನುವಂತೆ ನಿಯಮಿತವಾದ ಪರೀಕ್ಷೆಗಳು ನಾವು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುವವರ ಜೊತೆಗೆ ಮುಂದೆ ಬರಬಹುದಾದ ಕೆಲವು ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತದೆ. ಹೀಗೆಂದು ಸುಖಾ ಸುಮ್ಮನೆ ಪರೀಕ್ಷೆ ಮಾಡಿಸುವುದಲ್ಲ. ತಜ್ಞರ ಅಂದರೆ ನಮ್ಮ ವೈದ್ಯರ ಸಲಹೆಯೊಂದಿಗೆ ಯಾವೆಲ್ಲಾ ಪರೀಕ್ಷೆಗಳು ನಮಗೆ ಅಗತ್ಯ (Top 5 Blood Tests) ಎಂದು ಅನಿಸುತ್ತದೆ ಅಂತಹ ಪರೀಕ್ಷೆಗಳನ್ನು ಮಾಡಿಸುವುದು ಉತ್ತಮ.
ರಕ್ತ ಪರೀಕ್ಷೆ ಎಂದು ಕೂಡಲೇ ಹಲವಾರು ಬಗೆಯ ಪರೀಕ್ಷೆಗಳು ಇರುತ್ತವೆ. ಸಾಮಾನ್ಯವಾದ ಬ್ಲಡ್ ಶುಗರ್ ನಿಂದ ಹಿಡಿದು ಲಿವರ್ ನ ಕಾರ್ಯಕ್ಷಮತೆ ನಮ್ಮ ಕೊಲೆಸ್ಟ್ರಾಲ್ ಲೆವೆಲ್ಸ್ ಇದೆಲ್ಲವೂ ರತಪರೀಕ್ಷೆಯ ಮೂಲಕವೇ ತಿಳಿಯುತ್ತದೆ. ಹಾಗಾದರೆ ನಾವು ನಿಯಮಿತವಾಗಿ ಮಾಡಿಸುತ್ತಿರಬಹುದಾದ ಪರೀಕ್ಷೆಗಳು ಯಾವುದು ಮತ್ತು ಯಾವ ಪರೀಕ್ಷೆಗಳನ್ನು ಮಾಡಿಸಿದರೆ ಉತ್ತಮ ಎನ್ನುವುದನ್ನು ಈಗ ನೋಡೋಣ. ನಿಮ್ಮ ವೈದ್ಯರ ಸಲಹೆ ಮೇರೆಗೆ ಈ ಪರೀಕ್ಷೆಗಳಲ್ಲಿ ನಿಮಗೆ ಬೇಕಾದ ಪರೀಕ್ಷೆಗಳನ್ನು ನೀವು ಮಾಡಿಸುತ್ತಿರಬಹುದು ಅಥವಾ ಸುಮ್ಮನೆ ಈ ಪರೀಕ್ಷೆಗಳನ್ನು ಮಾಡಿಸುವುದರಿಂದ ಯಾವುದೇ ಅಪಾಯವಂತು ಖಂಡಿತ ಇಲ್ಲ.
ಇದನ್ನೂ ಓದಿ – ವಿದ್ಯಾರ್ಥಿಗಳಿಗೆ ಸುಲಭವಾಗಿ ಸಿಗುವ ಸಾಲ ಸೌಲಭ್ಯ
ಸಿ ಬಿ ಸಿ ಅಥವಾ ಕಂಪ್ಲೀಟ್ ಬ್ಲಡ್ ಕೌಂಟ್
ಸಿ ಬಿ ಸಿ ಎನ್ನುವುದು ಒಂದು ಮೂಲಭೂತ ರಕ್ತ ಪರೀಕ್ಷೆ ಆಗಿದ್ದು ಇದು ನಮ್ಮ ದೇಹದ ರಕ್ತ ಕಣಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಮಾಹಿತಿಯನ್ನು ನೀಡುತ್ತದೆ. ಇದು ನಮ್ಮ ದೇಹದ ಕೆಂಪು ರಕ್ತ ಕಣಗಳು, ಬಿಳಿ ರಕ್ತ ಕಣಗಳು ಪ್ಲೇಟ್ ಲೇಟ್ ನ ಕೌಂಟ್ ಗಳು ಹಾಗೂ ನಿಮ್ಮ ದೇಹದಲ್ಲಿ ಇರಬಹುದಾದ ಕೆಲವು ಅಲರ್ಜಿಗಳ ಬಗ್ಗೆ ಹಾಗೂ ರಕ್ತ ಸಂಬಂಧಿ ಸಮಸ್ಯೆಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ. ನಿಯಮಿತವಾದ ಸಿ ಬಿ ಸಿ ಪರೀಕ್ಷೆ ಸಾಮಾನ್ಯವಾಗಿ ಎಲ್ಲ ವೈದ್ಯರು ಸಲಹೆ ಮಾಡುವ ಒಂದು ಪರೀಕ್ಷೆಯಾಗಿದ್ದು ನೀವು ಇದನ್ನು ಮಾಡಿಸಬಹುದು. ಲ್ಯಾಬ್ ಗಳಲ್ಲಿ ಯಾವುದೇ ಪ್ರಿಸ್ಕ್ರಿಪ್ಶನ್ ಇಲ್ಲದೆಯೂ ಈ ಪರೀಕ್ಷೆ ಮಾಡಿಸಬಹುದು.
ಲಿಪಿಡ್ ಪ್ರೊಫೈಲ್
ನಮ್ಮ ದೇಹದ ಕೊಲೆಸ್ಟ್ರಾಲ್ ಲೆವೆಲ್ ಗಳನ್ನು ಮಿತಿಯಲ್ಲಿಡಲು ಈ ಪರೀಕ್ಷೆ ಬಹಳ ಅಗತ್ಯ (Top 5 Blood Tests). ಕೊಲೆಸ್ಟ್ರಾಲ್ ಲೆವೆಲ್ಸ್ ನಮ್ಮ ಹೃದಯದ ಮೇಲು ನೇರವಾದ ಪ್ರಭಾವವನ್ನು ಬೀರುವುದರಿಂದ ಇದು ಬಹಳ ಮುಖ್ಯವಾದ ಇನ್ನೊಂದು ಪರೀಕ್ಷೆಯಾಗಿದೆ. ನಮ್ಮ ದೇಹದಲ್ಲಿ ಲೋ ಡೆನ್ಸಿಟಿ ಲಿಪೋ ಪ್ರೊಟೀನ್ ಅಥವಾ ಏಲ್ ಡಿ ಎಲ್ (LDL) ಹೈ ಡೆನ್ಸಿಟಿ ಲಿಪೋ ಪ್ರೋಟೀನ್ಸ್ ಅಂದರೆ ಎಚ್ ಡಿ ಎಲ್ (HDL) ಮತ್ತು ಟ್ರೈಗ್ಲಿಸರೈಡ್ಸ್ ಇರುತ್ತದೆ.
ಜಗತ್ತಿನಾದ್ಯಂತ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ಈ ಪರೀಕ್ಷೆಗಳು ಬಹಳ ಅಗತ್ಯ ಆಗುತ್ತದೆ. ಹೆಚ್ಚಿನ ಎಲ್ ಡಿ ಎಲ್ ಲೆವೆಲ್ಸ್ ನಮ್ಮ ಹೃದಯದ ಮೇಲೆ ಪರಿಣಾಮ ಬೀರುವ ಬೀರುತ್ತವೆ. ಅದೇ ರೀತಿ ಎಚ್ ಡಿ ಎಲ್ ಅನ್ನು ಒಳ್ಳೆಯ ಕೊಲೆಸ್ಟ್ರಾಲ್ ಎನ್ನಲಾಗುತ್ತದೆ. ಇದು ಕಡಿಮೆ ಇದ್ದಲ್ಲಿ ಕೂಡ ನಮ್ಮ ಆರೋಗ್ಯ ಸರಿಯಾಗಿಲ್ಲ ಎಂದು ಅರ್ಥ. ಇದನ್ನು ನಿಯಮಿತವಾಗಿ ಪರೀಕ್ಷಿಸುತ್ತ ಇದ್ದಲ್ಲಿ ಯಾವುದೇ ಲೆವೆಲ್ಸ್ ಗಳು ಬಹಳ ಹೆಚ್ಚು ಕಮ್ಮಿ ಇದೆ ಎಂದಾದರೆ ವೈದ್ಯರ ಸಲಹೆ ಪಡೆಯುವುದು ಸುಲಭವಾಗುತ್ತದೆ. ನಿಮ್ಮ ಎಲ್ ಡಿ ಎಲ್ ಅಥವಾ ಎಚ್ ಡಿ ಎಲ್ ಯಾವುದೇ ಲೆವೆಲ್ ಹೆಚ್ಚು ಕಡಿಮೆ ಇದ್ದರೆ ಮೂರು ತಿಂಗಳಿಗೆ ಒಮ್ಮೆ ಪರೀಕ್ಷೆ ಮಾಡುವುದು ಉತ್ತಮ.
ಬ್ಲಡ್ ಗ್ಲೂಕೋಸ್ ಟೆಸ್ಟ್
ಕೇವಲ ಬ್ಲಡ್ ಶುಗರ್ ಅಥವಾ ಡಯಾಬಿಟಿಸ್ ಇದ್ದವರು ಮಾತ್ರ ಬ್ಲಡ್ ಗ್ಲುಕೋಸ್ ನ ಪರೀಕ್ಷೆ ಮಾಡಿಸಬೇಕು ಎಂದೇನಿಲ್ಲ. ನಿಯಮಿತವಾಗಿ ಈ ಪರೀಕ್ಷೆ ಮಾಡಿಸುವುದರ ಮೂಲಕ ಬ್ಲಡ್ ಗ್ಲುಕೋಸ್ ನ ಏರಿಳಿತಗಳ ವಿವರ ನಮಗೆ ತಿಳಿಯುತ್ತಿದ್ದು ಇದು ನಾವು ಎಷ್ಟು ಪ್ರಮಾಣದ ಗ್ಲುಕೋಸ್ ಅಥವಾ ಸಕ್ಕರೆಯ ಅಂಶವನ್ನು ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಲು ಸಹಾಯ ಆಗುತ್ತದೆ. ನಮ್ಮ ರಕ್ತದಲ್ಲಿ ಗ್ಲೂಕೋಸ್ ಲೆವೆಲ್ಸ್ ಕಂಡು ಬರುತ್ತಿದ್ದರೆ ನಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳಬಹುದಾದ ಬದಲಾವಣೆಗಳಿಂದ ನಾವು ಡಯಾಬಿಟಿಸ್ ಇಂದ ದೂರ ಇರಬಹುದು ಹಾಗೂ ಔಷಧಿ ಇಲ್ಲದೆ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿ ಇಡಬಹುದು. ಹೆಚ್ಚಿನ ಗ್ಲೂಕೋಸ್ ಲೆವೆಲ್ ಹೃದಯ ಮತ್ತು ಕಿಡ್ನಿಯ ಮೇಲೆ ನೇರವಾದ ಪ್ರಭಾವ ಬೀರುವುದರಿಂದ ಈ ಪರೀಕ್ಷೆ ಬಹಳ ಪ್ರಮುಖವಾಗಿದೆ. ಮನೆಯಲ್ಲೇ ಗ್ಲೂಕೋಸ್ ಲೆವೆಲ್ ಅನ್ನು ಪರೀಕ್ಷೆ ಮಾಡಬಹುದಾದರೂ ಲ್ಯಾಬ್ (Top 5 Blood Tests) ಗಳಲ್ಲಿ ಮಾಡಿಸುವ ಪರೀಕ್ಷೆ ಹೆಚ್ಚು ನಿಖರವಾಗಿರುತ್ತದೆ ಆದ್ದರಿಂದ ಬಾರ್ಡರ್ ಲೈನ್ ನಲ್ಲಿ ಗ್ಲೂಕೋಸ್ ಇದ್ದಲ್ಲಿ ಲ್ಯಾಬ್ ಗಳಲ್ಲಿ ಪರೀಕ್ಷೆ ಮಾಡಿಸಿ ನಿಮ್ಮ ವೈದ್ಯರನ್ನು ಭೇಟಿ ಮಾಡಬಹುದು.
ಥೈರಾಯ್ಡ್ ಫಂಕ್ಷನ್ ಟೆಸ್ಟ್
ನಮ್ಮ ದೇಹದ ಎನರ್ಜಿ ಲೆವೆಲ್ ಗಳನ್ನು ಹಾಗೂ ಮೆಟಬಾಲಿಸಂನ್ನು ನಿಯಂತ್ರಣದಲ್ಲಿರಲು ಥೈರಾಯ್ಡ್ ಗ್ಲ್ಯಾಂಡ್ ಅಥವಾ ಗ್ರಂಥಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಥೈರಾಯ್ಡ್ ಫಂಕ್ಷನ್ ಟೆಸ್ಟ್ ಗಳಲ್ಲಿ ಟಿ ಎಸ್ ಹೆಚ್ ಅಂದರೆ ಥೈರಾಯ್ಡ್ ಸ್ಟಿಮುಲೇಟಿಂಗ್ ಹಾರ್ಮೋನ್, T3 (ಟ್ರಿಯೋಡೋಥೈರಾನಿನ್) ಮತ್ತು T4 (ಥೈರಾಕ್ಸಿನ್) ಪರೀಕ್ಷೆಗಳು ನಡೆದು ಇವು ನಮ್ಮ ಒಟ್ಟಾರೆ ಥೈರಾಯಿಡ್ ಆರೋಗ್ಯದ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ.
ಲಿವರ್ ಫಂಕ್ಷನ್ ಟೆಸ್ಟ್
ನಮ್ಮ ದೇಹದ ವಿವಿಧ ಎನ್ಸೈಮ್ಸ್ (Enzymes) ಪ್ರೋಟೀನ್ಸ್ (Proteins) ಮತ್ತು ರಕ್ತದಲ್ಲಿರುವ ಸಬ್ ಸ್ಟ್ಯಾಂಡ್ಸ್ (Substances in Blood) ಗಳ ಪರೀಕ್ಷೆ ಮಾಡುವುದು ಅಗತ್ಯ. ಎನ್ಸೈಮ್ಸ್ (Enzymes) ಲೆವೆಲ್ಸ್ ಹೆಚ್ಚಾಗಿರುವುದು ಲಿವರ್ ನಲ್ಲಿ ಏನೋ ದೋಷ ಇದೆ ಎನ್ನುವುದನ್ನು ಸೂಚಿಸುತ್ತದೆ. ಇದರಿಂದ ಫ್ಯಾಟಿ ಲಿವರ್, ಹೆಪಟೈಟಿಸ್, ಸಿರೊಸಿಸ್ ನಂತಹ ಆರೋಗ್ಯ ಸ್ಥಿತಿಗಳನ್ನು ಮೊದಲೇ ಗುರುತಿಸಿ ಇದಕ್ಕೆ ಬೇಕಾದಂತೆ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಇದಕ್ಕೆ ಬೇಕಾದ ಔಷಧಿಗಳನ್ನು ತೆಗೆದುಕೊಂಡು ಆರೋಗ್ಯ ಹಾಳಾಗದಂತೆ ಕಾಪಾಡಬಹುದು. ಇದರಿಂದಾಗಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಇಂದೆ ತಡೆಯುವುದು ಸುಲಭವಾಗುತ್ತದೆ.
ಕೇವಲ ಇವಿಷ್ಟೇ ರಕ್ತ ಚಿಕಿತ್ಸೆಗಳು ಇರುವುದು ಎಂದಲ್ಲ. ಆದರೆ ಈ ಪರೀಕ್ಷೆಗಳಿಂದ ನಮ್ಮ ದೇಹದಲ್ಲಿ ಬರಬಹುದಾದ ಸಾಮಾನ್ಯ ಸಮಸ್ಯೆಗಳನ್ನು ಎದುರಿಸುವುದು ಸುಲಭ ಆಗುತ್ತದೆ. ಇದರ ಜೊತೆಗೆ ಬೇರೆ ಆರೋಗ್ಯ ಸಂಬಂಧಿ ಪರೀಕ್ಷೆಗಳನ್ನು ಮಾಡಿಸುತ್ತಾ ಇದ್ದಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳನ್ನು ಈಗಲೇ ಗುರುತಿಸಿ ಅದಕ್ಕೆ ಬೇಕಾದಂತೆ ಕ್ರಮಗಳನ್ನು ಕೈಗೊಳ್ಳುವುದು ಸುಲಭವಾಗುತ್ತದೆ.
ಇದನ್ನೂ ಓದಿ – ಟಾಕ್ಸ್ ಸೇವಿಂಗ್ ಪ್ಲಾನ್ಸ್