Tax Saving Options ತೆರಿಗೆ ವಿನಾಯಿತಿ ಇರುವ ಹೂಡಿಕೆ ಆಯ್ಕೆಗಳು

Tax Saving Options

ಆದಾಯ ತೆರಿಗೆ ಉಳಿಸಬೇಕು (Tax Saving Options) ಎಂದು ಯೋಚನೆ ಮಾಡಿಕೊಂಡವರು ತಮ್ಮ ಹೂಡಿಕೆಗಳನ್ನು ಮಾರ್ಚ್ 31ರ ಮಾಡಬೇಕಾಗುತ್ತದೆ. ಮಾರ್ಚ್ 31ರವರೆಗೆ ಮಾಡಿರುವ ಹೂಡಿಕೆಗಳು ಮಾತ್ರ ಆರ್ಥಿಕ ವರ್ಷ 2023-24 ರ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಒಳಪಡುತ್ತವೆ. ಇದಾದ ನಂತರ ಮಾಡಿರುವ ಯಾವುದೇ ಹೂಡಿಕೆಗಳು ಅಥವಾ ದೇಣಿಗೆಗಳು ಈ ವರ್ಷದ ಟ್ಯಾಕ್ಸ್ ಸೇವಿಂಗ್ ನ ಯೋಜನೆಯಲ್ಲಿ ಒಳಗಾಗುವುದಿಲ್ಲ.

ಬಹಳಷ್ಟು ಮಂದಿ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಟ್ಯಾಕ್ಸ್ ಸೇವಿಂಗ್ಸ್ (Tax Saving Options) ಗಾಗಿ ಹೂಡಿಕೆಯನ್ನು ಮಾಡಲು ಆರಂಭಿಸುತ್ತಾರೆ. ಆದರೆ ಹಲವಾರು ಮಂದಿಗೆ ಆ ಸಮಯದಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚನೆ ಇದ್ದರೂ ಕೂಡ ಹಣದ ಅಭಾವ ಇದ್ದು ಹೂಡಿಕೆ ಮಾಡಲಾಗದೆ ಹೆಚ್ಚಿನ ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ಇಂದಿನಂದಲೇ ನಮ್ಮ ಈ ವರ್ಷದ ಆದಾಯ ಎಷ್ಟು ಹಾಗೂ ಇಲ್ಲಿಯ ತನಕ ಯಾವೆಲ್ಲ ಹೂಡಿಕೆಗಳು ಟ್ಯಾಕ್ಸ್ ಸೇವಿಂಗ್ ನ ಅಡಿಯಲ್ಲಿ ಬರುತ್ತದೆ ಎಂದು ಯೋಚನೆ ಮಾಡಿದಲ್ಲಿ ಹೊಸ ಹೂಡಿಕೆಗಳನ್ನು ಮಾಡಲು ಸಾಕಷ್ಟು ಸಮಯ ಸಿಗುತ್ತದೆ.

ನೀವು ಈಗಾಗಲೇ ಯಾವೆಲ್ಲಾ ಸೇವಿಂಗ್ ನಲ್ಲಿ ಹೂಡಿಕೆಗಳನ್ನು ಮಾಡಬೇಕು ಎಂದು ನಿರ್ಧಾರ ಮಾಡಿದ್ದಲ್ಲಿ ನಿಮ್ಮ ಯೋಚನೆಯ ಪ್ರಕಾರ ಮುಂದುವರಿಯಬಹುದು. ನಿಮಗೆ ಯಾವ ಹೂಡಿಕೆಯಲ್ಲಿ ಟ್ಯಾಕ್ಸ್ ಸೇವಿಂಗ್ (Tax Saving Options) ಮಾಡಬೇಕು ಹಾಗೂ ಎಲ್ಲಿ ಹೆಚ್ಚಿನ ರಿಟರ್ನ್ಸ್ ಗಳು ಸಿಗುತ್ತವೆ ಎಂಬ ಬಗ್ಗೆ ಯಾವುದೇ ಸ್ವಲ್ಪ ಸಂಶಯಗಳು ಇದ್ದರೂ ಕೂಡ ಈ ಮುಂದೆ ಓದಿ. ನಿಮ್ಮ ಸಂದೇಹಗಳು ಪರಿಹಾರವಾಗಿ ನೀವು ಖಂಡಿತ ಹೆಚ್ಚಿನ ಟ್ಯಾಕ್ಸ್ ಸೇವಿಂಗ್ ಅನ್ನು ಮಾಡುತ್ತೀರಿ.

Tax Saving Options

ಸರಕಾರ ಆದಾಯ ತೆರಿಗೆಯನ್ನು ವಿಧಿಸುವುದು ಹಾಗೂ ಇದಕ್ಕೆ ಕೆಲವು ಹೂಡಿಕೆಗಳ ಆಯ್ಕೆಗಳನ್ನು ನೀಡಿ ಈ ಹೂಡಿಕೆಗಳನ್ನು ಮಾಡಿದಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವುದು ನಮ್ಮಲ್ಲಿ ಹೆಚ್ಚಿನ ಉಳಿತಾಯದ ಅಭ್ಯಾಸ ಬೆಳೆಯಲಿ ಎಂಬ ಕಾರಣಕ್ಕೆ ಆಗಿರುತ್ತದೆ. ಹೀಗೆ ಯಾವೆಲ್ಲ ಕ್ಷೇತ್ರಗಳಲ್ಲಿ ಉಳಿತಾಯ ಮಾಡಬಹುದು ನೋಡೋಣ.

ಹೀಗೆ ಮಾಡಿರುವ ಉಳಿತಾಯ ಟ್ಯಾಕ್ಸ್ ಕೂಡ ಸೇವ್ (Tax Saving Options) ಮಾಡಬೇಕು ಜೊತೆಗೆ ನಮಗೆ ಭವಿಷ್ಯದಲ್ಲಿ ಉತ್ತಮ ರಿಟರ್ನ್ಸ್ ಗಳನ್ನು ಕೂಡ ಕೊಡಬೇಕು ಅಥವಾ ನಮ್ಮ ಜೀವನವನ್ನು ಭದ್ರವನ್ನಾಗಿಸಬೇಕು ಅಂತಹ ಟ್ಯಾಕ್ ಸೇವಿಂಗ್ ಯೋಜನೆಗಳನ್ನು ಈಗ ಹೇಳಲಿದ್ದೇವೆ.

ಗೃಹ ಸಾಲ

ಮನೆ ಕಟ್ಟುವುದು ಎಲ್ಲರ ಜೀವನದ ಕನಸಾಗಿರುವುದು ಸುಳ್ಳಲ್ಲ. ಈಗಾಗಲೇ ಮನೆ ಇದ್ದವರು ಕೂಡ ನಮ್ಮ ಜೀವನ ಕಾಲದಲ್ಲಿ ಇನ್ನೊಂದು ಮನೆಯನ್ನು ಕಟ್ಟಬೇಕು ಎಂಬ ಆಸೆಯನ್ನು ಹೊಂದಿಯೇ ಇರುತ್ತೇವೆ. ನಮಗೆ ಬೇಕಾದ ವಿನ್ಯಾಸದಲ್ಲಿ ನಮಗೆ ಬೇಕಾದ ಜಾಗದಲ್ಲಿ ಮನೆ ಕಟ್ಟುವುದು ಕೂಡ ಒಂದು ದೊಡ್ಡ ಕನಸಾಗಿರುತ್ತದೆ. ಹೀಗೆ ಗೃಹ ಸಾಲವನ್ನು ಪಡೆದು ನಾವು ನಮ್ಮ ಕನಸನ್ನು ಕೂಡ ಈಡೇರಿಸಬಹುದು ಜೊತೆಗೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಕೂಡ ಪಡೆಯಬಹುದು.

ಆದಾಯ ತೆರಿಗೆ ಸೆಕ್ಷನ್ 80 ಸಿ ಯ ಪ್ರಕಾರ ನಾವು ಪಡೆದುಕೊಂಡ ಸಾಲದ ಅಸಲು ಮೊತ್ತವನ್ನು ಮರುಪಾವತಿ ಮಾಡಿರುವ 1.5 ಲಕ್ಷ ಹಾಗೂ ಇದಕ್ಕೆ ಕಟ್ಟಿರುವ ಬಡ್ಡಿಯ 2 ಲಕ್ಷಗಳ ತನಕ ತೆರಿಗೆ ವಿನಾಯಿತಿ (Tax Saving Options) ಪಡೆಯಬಹುದು. ಇದಲ್ಲದೆ ಹೊಸ ಮನೆ ಖರೀದಿ ಮಾಡಿ ಬಾಡಿಗೆಗೆ ಕೊಟ್ಟಾಗಲೂ ಬಡ್ಡಿಯ ಎಲ್ಲಾ ಭಾಗದಲ್ಲಿ ಆದಾಯ ತೆರಿಗೆ ವಿನಾಯಿತಿಯ ಲಾಭ ಪಡೆಯಬಹುದಾಗಿದೆ. ನಾವು ಜಾಗ ತೆಗೆದುಕೊಂಡು ಅಲ್ಲಿ ಮನೆ ಕಟ್ಟುವುದಾದರೆ ಐದು ವರ್ಷದ ಒಳಗೆ ಮನೆ ಕಟ್ಟುತ್ತೇವೆ ಎಂದಾದಲ್ಲಿ ಸೆಕ್ಷನ್ 24 ಬಿ ಯ ಪ್ರಕಾರ ಆ ಹಣಕ್ಕೂ ತೆರಿಗೆ ವಿನಾಯಿತಿ ಸಿಗಲಿದೆ.

Tax Saving Options

ಇದಲ್ಲದೆ ಸೆಕ್ಷನ್ 80 ಇ ಇ ಎ ಯ ಪ್ರಕಾರ ನಮ್ಮ ಮನೆ ಮೊದಲ ಮನೆಯಾಗಿದ್ದಲ್ಲಿ ಇದಕ್ಕಿಂತಲೂ ಹೆಚ್ಚಿನ ತೆರಿಗೆ ವಿನಾಯಿತಿಯನ್ನು ನಾವು ಪಡೆಯಬಹುದಾಗಿದೆ.

ಹೆಲ್ತ್ ಇನ್ಸೂರೆನ್ಸ್ ಆರೋಗ್ಯ ವಿಮೆ

ಇಂದಿನ ಕಾಲದಲ್ಲಿ ವೈದ್ಯಕೀಯ ಖರ್ಚುಗಳು ತುಂಬಾ ಜಾಸ್ತಿ ಆಗಿರುವ ಸಮಯವಾಗಿದೆ. ದೊಡ್ಡ ಹಾಸ್ಪಿಟಲ್ ಗಳಲ್ಲಿ ಉತ್ತಮ ಚಿಕಿತ್ಸೆ ದೊರೆತರೂ ಸಾಮಾನ್ಯವಾಗಿ ಎಲ್ಲಾ ಚಿಕಿತ್ಸೆಗಳು ಕೂಡ ದುಬಾರಿ ಆಗಿರುತ್ತವೆ. ಇಂತಹ ಸಮಯದಲ್ಲಿ ಆರೋಗ್ಯ ವಿಮೆಯನ್ನು ಖರೀದಿಸುವುದು ಉತ್ತಮ ಯೋಜನೆಯಾಗಿದ್ದು ಇದು ಆರೋಗ್ಯವನ್ನು ಸುರಕ್ಷಿತ ಇಡುವುದರ ಜೊತೆಗೆ ಆದಾಯ ತೆರಿಗೆ ವಿನಾಯಿತಿ ನೀಡುತ್ತದೆ. 80 ಡಿ ಯ ಪ್ರಕಾರ ಇನ್ಸೂರೆನ್ಸ್ ಪಾಲಿಸಿ ಗೆ ಕಟ್ಟಿದ ಪ್ರೀಮಿಯಂ ಮೊತ್ತವನ್ನು ತೆರಿಗೆ ವಿನಾಯಿತಿಯ ವ್ಯಾಪ್ತಿಯಲ್ಲಿ (Tax Saving Options) ತರಲಾಗಿದೆ. ವಯೋಮಿತಿಯ ಪ್ರಕಾರ ವಿವಿಧ ಮೊತ್ತದ ಪಾಲಿಸಿಗೆ ಅನುಗುಣವಾಗಿ ಆದಾಯ ತೆರಿಗೆಯಲ್ಲಿ ವಿನಾಯಿತಿಗಳು ಸಿಗಲಿವೆ.

ಸರ್ಕಾರಿ ಸ್ಕೀಮ್ ಗಳು

ಸರ್ಕಾರಿ ಸ್ಕೀಮ್ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ರಿಟರ್ನ್ಸ್ ನೀಡುವುದರ ಜೊತೆಗೆ ಆದಾಯ ತೆರಿಗೆಯಿಂದಲೂ ಕೂಡ ವಿನಾಯಿತಿ ನೀಡುತ್ತದೆ. ಈ ಮೊದಲೇ ಹೇಳಿದಂತೆ ಹೆಚ್ಚಿನ ಉಳಿತಾಯವನ್ನು ಉತ್ತೇಜಿಸುವ ಕಾರಣಕ್ಕೆ ಇಂಥ ಯೋಜನೆಗಳನ್ನು ಮಾಡಲಾಗುತ್ತದೆ. ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿ 1.5 ಲಕ್ಷದ ತನಕ ತೆರಿಗೆ ವಿನಾಯಿತಿಯನ್ನು (Tax Saving Options) ಪಡೆಯಬಹುದಾಗಿದೆ. ಇದು ಆದಾಯ ತೆರಿಗೆಯ ಸೆಕ್ಷನ್ 80 ಸಿ ಯ ಒಳಗೆ ಬರುವ ನಿಯಮಗಳಾಗಿವೆ. ಈ ಕೆಳಗಿನ ಕೆಲವು ಯೋಜನೆಗಳು ಉದಾಹರಣೆಯಾಗಿ ನಿಮ್ಮ ಮುಂದೆ ಇಡುತ್ತಿದ್ದೇವೆ.

Tax Saving Options

  • ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (ಎಸ್ ಸಿ ಎಸ್ ಎಸ್) ಐದು ವರ್ಷದ ಲಾಕ್ ಇನ್ ಪಿರಿಯಡ್ ಇದ್ದು 4% ತನಕದ ಬಡ್ಡಿ ಸಿಗುತ್ತದೆ.
  • ಸುಕನ್ಯ ಸಂಗತಿ ಯೋಜನ (ಎಸ್ ಎಸ್ ವೈ) – ಈ ಯೋಜನೆಯಲ್ಲಿ 6% ತನಕದ ಬಡ್ಡಿ ಸಿಗುತ್ತದೆ.
  • ನ್ಯಾಷನಲ್ ಪೆನ್ಷನ್ ಸ್ಕೀಮ್ (ಎನ್ ಪಿ ಎಸ್) – ನಿವೃತ್ತರಾಗುವ ತನಕ ಹೂಡಿಕೆ ಮಾಡಬೇಕು – 12 – 14% ರಿಟರ್ನ್ಸ್ ಇಲ್ಲಿ ಸಿಗಲಿದೆ.
  • ಪಬ್ಲಿಕ್ ಪ್ರಾವಿಡೆಂಟ್ಫಂಡ್ (ಪಿ ಪಿ ಎಫ್) – ಐದು ವರ್ಷಗಳ ಲಾಕ್ ಇನ್ ಪಿರಿಯಡ್ ಇದ್ದು 6-7% ಬಡ್ಡಿಯ ದರಗಳು ಸಿಗಲಿವೆ.
  • ಟಾಕ್ಸ್ ಫ್ರೀ ಮ್ಯೂಚುವಲ್ ಫಂಡ್ ಗಳು – ಲಾಕ್ ಇನ್ ಪಿರಿಯಡ್ ಜೊತೆಗೆ ಬರುತ್ತವೆ ಆದರೆ ಮಾರುಕಟ್ಟೆಯು ಉತ್ತಮವಾಗಿದ್ದರೆ ಅತಿ ಹೆಚ್ಚು ರಿಟರ್ನ್ಸ್ ನಿಮ್ಮದಾಗಬಹುದು.

ಲೈಫ್ ಇನ್ಶುರೆನ್ಸ್ ಯೋಜನೆ ಅಥವಾ ಜೀವ ವಿಮೆ

ಸೆಕ್ಷನ್ 80 ಸಿ ಯ ಪ್ರಕಾರ ನಾವು ಕಟ್ಟುವ ಪ್ರೀಮಿಯಂನ ಮೊತ್ತವನು ಆದಾಯ ತೆರಿಗೆ ಅಡಿ ತರಲಾಗಿದೆ. ನಾವು ಮಾಡಿರುವ ಲೈಫ್ ಇನ್ಶುರೆನ್ಸ್ ನ ಪ್ರೀಮಿಯಂ ಪೇಮೆಂಟ್ ಗಳು ಆದಾಯ ತೆರಿಗೆಯಿಂದ ವಿನಾಯಿತಿ ಕೊಡಲು ನೆರವಾಗುತ್ತವೆ. ಇದಲ್ಲದೆ ಸೆಕ್ಷನ್ 10 ಡಿ ಯ ಪ್ರಕಾರ ನಾವು ಸ್ವೀಕರಿಸುವ ಮೆಚುರಿಟಿ ಹಣದ ಮೇಲು ತೆರಿಗೆ ವಿನಾಯಿತಿಯನ್ನು ನೀಡುತ್ತದೆ.

ನಾವು 1 ಏಪ್ರಿಲ್ 2012 ರ ನಂತರ ಪಾಲಿಸಿ ತೆಗೆದುಕೊಂಡಿದ್ದಲ್ಲಿ ನಾವು ವಾರ್ಷಿಕವಾಗಿ ಕಟ್ಟುವ ಪ್ರೀಮಿಯಂ ಒಟ್ಟು ವಿಮೆ ಮೊತ್ತದ 10% ಗಿಂತ ಕಮ್ಮಿ ಇದ್ದಲ್ಲಿ 1.5 ಲಕ್ಷದ ತನಕ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಅದೇ 1 ಏಪ್ರಿಲ್ 2012ರ ಮೊದಲು ಪಾಲಿಸಿ ಖರೀದಿಸಿದ್ದಲ್ಲಿ ಪಾಲಿಸಿ ಮೊತ್ತದ 20 ಶೇಕಡಾದ ತನಕವು ಪ್ರೀಮಿಯಂ ಕಟ್ಟಿದಲ್ಲಿ ಆ ಎಲ್ಲಾ ಹಣವನ್ನು ತೆರಿಗೆ ವಿನಾಯಿತಿ ವ್ಯಾಪ್ತಿಗೆ ತರಬಹುದು.

ಈ ಮೊದಲೇ ಹೇಳಿದಂತೆ ವರ್ಷದ ಆರಂಭದಲ್ಲಿ ಈ ವರ್ಷ ನಮ್ಮ ಆದಾಯ ಎಷ್ಟು, ಈ ವರ್ಷ ನಾವು ಎಷ್ಟೆಲ್ಲಾ ಪ್ರೀಮಿಯಂಗಳು ಅಥವಾ ಕಂತುಗಳನ್ನು ಕಟ್ಟಬೇಕಾಗಿದೆ ಅದರಲ್ಲಿ ಎಷ್ಟೆಲ್ಲಾ ಕಂತುಗಳು ತೆರಿಗೆ ವಿನಾಯಿತಿ ವ್ಯಾಪ್ತಿಯಲ್ಲಿ ಬರುತ್ತವೆ ಎಂಬ ಯೋಚನೆ ಇದ್ದಲ್ಲಿ ಮುಂದೆ ಎಷ್ಟು ಹೂಡಿಕೆಗಳನ್ನು ತೆರಿಗೆ ವಿನಾಯಿತಿಯ ಅಡಿಯಲ್ಲಿ ತರಬಹುದಾಗಿದೆ ಎಂದು ನಾವು ಪ್ಲಾನ್ ಮಾಡಬಹುದು. ಇನ್ನು ಎರಡು ತಿಂಗಳ ಕಾಲ ಇರಬೇಕಾದ ಸಮಯದಲ್ಲಿ ಈಗಲೇ ಸರಿಯಾಗಿ ಪ್ಲಾನ್ ಮಾಡಿದರೆ ನಾವು ದುಡಿದ ಹಣದ ಹೆಚ್ಚಿನ ಭಾಗ ನಮ್ಮ ಹೂಡಿಕೆಗಳಿಗೆ ಮೀಸಲಾಗುತ್ತದೆ ವಿನಃ ತೆರಿಗೆಗಾಗಿ ಕಟ್ಟಬೇಕಾಗಿಲ್ಲ.

 

Leave a Reply

Your email address will not be published. Required fields are marked *