ಉಳಿತಾಯ ಮತ್ತು ಹೂಡಿಕೆ ಅಂದರೆ ಸೇವಿಂಗ್ಸ್ ಮತ್ತು ಇನ್ವೆಸ್ಟ್ಮೆಂಟ್ ಒಂದು ಅಭ್ಯಾಸ ಆಗಿ ಹೋಗಬೇಕು. ಇದನ್ನು ನಾವು ಕಷ್ಟಪಟ್ಟು ಮಾಡುವುದಲ್ಲದೆ ಇಷ್ಟಪಟ್ಟು ಮಾಡಲಾರಂಬಿಸಬೇಕು ಹಾಗೂ ಮುಖ್ಯವಾಗಿ, ಸಾಧ್ಯವಾದಷ್ಟು ಬೇಗನೇ ಆರಂಭಿಸಬೇಕು (Start investing early). ಹೀಗೆ ಆದಾಗ ಹಣ ಸೇವ್ ಮಾಡುವುದು ಒಂದು ಕಷ್ಟ ಅನಿಸದೆ ಇದು ನಮ್ಮ ಒಂದು ಮೂಲಭೂತ ಕರ್ತವ್ಯ ಅಥವಾ ಜವಾಬ್ದಾರಿ ಎಂದು ಅನಿಸುತ್ತದೆ.
ನಾವು ಅರ್ನಿಂಗ್ (Earning) ಅಥವಾ ಸಂಪಾದನೆ ಆರಂಭ ಮಾಡಿದ ಕೂಡಲೇ ಸೇವಿಂಗ್ಸ್ ಆರಂಭಿಸಿದರೆ ಮುಂದೊಂದು ದಿನ ಅದು ಬಹುದೊಡ್ಡ ಮೊತ್ತವಾಗಿ ನಮ್ಮ ಕೈ ಸೇರುತ್ತದೆ ಇಂದಿನ ಚಿಕ್ಕ ಚಿಕ್ಕ ಹೂಡಿಕೆಗಳೆ ಮುಂದೆ ಹೆಮ್ಮರವಾಗಿ ಬೆಳೆದು ನಮ್ಮ ಅಗತ್ಯದ ಸಮಯದಲ್ಲಿ ನಮಗೆ ಆಶ್ರಯ ನೀಡುತ್ತದೆ.
“Do not save what is left after spending, but spend what is left after savings” – Warren Buffett
ನಾವು ಗಳಿಸಿದ ಹಣವನ್ನು ಹೇಗೆ ವ್ಯಯ ಮಾಡಬೇಕು ಎನ್ನುವುದರ ಬಗ್ಗೆ ಪ್ರಖ್ಯಾತವಾದ ಒಂದು ಫಾರ್ಮುಲಾ ಇದೆ ಅದೇ 50-2-30. ನಮ್ಮ ಆದಾಯದ 50 ಶೇಕಡದಷ್ಟು ಹಣವನ್ನು ಮೂಲಭೂತ ಅಗತ್ಯಗಳಿಗಾಗಿ, 20 ಶೇಕಡಾದಷ್ಟು ನಮ್ಮ ಆದಾಯವನ್ನು ಸೇವಿಂಗ್ಸ್ ಅಥವಾ ಹೂಡಿಕೆಗೆ ಮೀಸಲಿಡಬೇಕು. ಉಳಿದ 30 ಶೇಕಡಾ ಹಣವನ್ನು ನಮ್ಮ ಇತರ ಅಗತ್ಯಗಳಿಗಾಗಿ ನಾವು ಬಳಸಿಕೊಳ್ಳಬೇಕು. ಈ ನಿಯಮ ಪಾಲಿಸಿದವರು ಆರ್ಥಿಕವಾಗಿ ಎಂದೂ ಅಸಫಲರಾಗುವುದಿಲ್ಲ (Start investing early) ಎಂಬ ಮಾತಿದೆ.
ನಾವು ಗಳಿಸಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ತಿಳಿಯದೆ ಇದ್ದಲ್ಲಿ ನಾವು ಮೊದಲಿಗೆ ಆರಂಭ ಮಾಡಬೇಕಾಗಿರುವುದು ಸೇವಿಂಗ್ಸ್ ಅಥವಾ ಉಳಿತಾಯ. ಹೀಗೆ ಉಳಿತಾಯ ಮಾಡುತ್ತಿರುವ ಹಣವನ್ನು ಮುಂದೆ ನಾವೇ ಕಂಡುಕೊಂಡ ಜಾಗಗಳಲ್ಲಿ ಉದಾಹರಣೆಗೆ ಶೇರು ಮಾರುಕಟ್ಟೆಯಲ್ಲಿ, ರಿಯಲ್ ಎಸ್ಟೇಟ್ ನಲ್ಲಿ ಚಿನ್ನದ ಮೇಲೆ ಇನ್ವೆಸ್ಟ್ ಅಥವಾ ಹೂಡಿಕೆ ಮಾಡಬಹುದು. ಎಲ್ಲಾದಕ್ಕೂ ಮೂಲ ಸೇವಿಂಗ್ಸ್ ಆಗಿರುತ್ತದೆ. ಸೇವಿಂಗ್ಸ್ ನ ಅಭ್ಯಾಸ ಒಂದು ಬಾರಿ ಬಂದುಬಿಟ್ಟರೆ ನಂತರ ಹೂಡಿಕೆ ಮಾಡಬೇಕಾದ ಸಮಯದಲ್ಲಿ ನಾವು ತಜ್ಞರು ಅಥವಾ ಈ ಕ್ಷೇತ್ರದಲ್ಲಿ ಪಳಗಿದವರ ಸಲಹೆಗಳನ್ನು ಪಡೆದುಕೊಂಡು ಸರಿಯಾದ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು.
“Beware of little expenses; A small leak will sink a great ship” – Benjamin Franklin
ಆದಷ್ಟು ಬೇಗನೆ ಸೇವಿಂಗ್ಸ್ ಆರಂಭಿಸುವುದರಿಂದ ಆಗುವ ಪ್ರಯೋಜನಗಳು ಯಾವುದು ಎಂಬುದನ್ನು ನೋಡೋಣ.
ಕಾಂಪೌಂಡಿಂಗ್ (Compounding)
ಕಾಂಪೌಂಡಿಂಗ್ (Compounding) ಅಂದರೆ ಹಾಕಿದ ಅಸಲಿಗೆ ಬಡ್ಡಿ ಸೇರಿಕೊಂಡು ಬೆಳೆಯುತ್ತಾ ಹೋಗುವ ನಮ್ಮ ಸೇವಿಂಗ್ಸ್. ಚಿಕ್ಕ ವಯಸ್ಸಿನಲ್ಲೇ ಸೇವಿಂಗ್ಸ್ ಆರಂಭಿಸಿದರೆ ಆ ಚಿಕ್ಕ ಮೊತ್ತಕ್ಕೆ ಬರುವ ಬಡ್ಡಿಯನ್ನು ಸೇರಿಸುತ್ತಾ ಹೋದಂತೆ ಉಳಿತಾಯ ದೊಡ್ಡ ಮೊತ್ತ ಆಗುತ್ತದೆ. ಇದಕ್ಕಾಗಿ ನಾವು ಚಿಕ್ಕ ವಯಸ್ಸಿನಲ್ಲೇ ಉಳಿತಾಯ ಆರಂಭಿಸಿ ಶಿಸ್ತಾಗಿ ಪಾಲಿಸಬೇಕು. ಈಗಾಗಲೇ ಹೇಳಿರುವ 50-20-30 ನಿಯಮದ ಪ್ರಕಾರ 20 ಶೇಕಡ ಆದಾಯವನ್ನು ಸೇವ್ ಮಾಡುತ್ತಾ ಹೋದಲ್ಲಿ ಮುಂದೊಂದು ದಿನ ಇದು ಖಂಡಿತ ನಮ್ಮ ನೆರವಿಗೆ ಬರುತ್ತದೆ (Start investing early).
ಕಾಂಪೌಂಡಿಂಗ್ ಒಂದು ಸರಳವಾದ ಉದಾಹರಣೆ ಹೇಳುವುದಾದರೆ ನಮ್ಮ 25ನೇ ವಯಸ್ಸಿನಲ್ಲಿ ನಾವು ಒಂದು ಸಾವಿರ ರೂಪಾಯಿ ಪ್ರತಿ ತಿಂಗಳು ಉಳಿತಾಯ ಆರಂಭಿಸಿದರೆ, ನಮ್ಮ 50ನೇ ವರ್ಷಕ್ಕೆ ನಮ್ಮ ಬಳಿ ಸುಮಾರು 18 ಲಕ್ಷ ರೂಪಾಯಿಗಳು ಇರುತ್ತವೆ. ಅದೇ ನಾವು 35ನೇ ವಯಸ್ಸಿನಲ್ಲಿ ಇಷ್ಟೇ ಮೊತ್ತದ ಸೇವಿಂಗ್ಸ್ ಆರಂಭಿಸಿದರೆ, ನಮ್ಮ 50ನೇ ವರ್ಷಕ್ಕೆ ನಮ್ಮ ಬಳಿ ಇರುವುದು ಕೇವಲ 5 ಲಕ್ಷ ರೂಪಾಯಿಗಳು.
ರಿಸ್ಕ್ ತೆಗೆದುಕೊಳ್ಳುವ ಕ್ಷಮತೆ ಹೆಚ್ಚುತ್ತದೆ.
ನಮ್ಮ ಬಳಿ ಆರ್ಥಿಕ ಸ್ಥಿರತೆ ಇದ್ದಾಗ ಮಾತ್ರ ನಾವು ಜೀವನದಲ್ಲಿ ದೊಡ್ಡ ರಿಸ್ಕ್ ಗೆ ತಯಾರಾಗಿರುತ್ತೇವೆ. ಮುಂದೊಂದು ದಿನ ಯಾವುದೇ ಒಂದು ಉದ್ಯಮ ಅಥವಾ ವ್ಯವಹಾರದ ಅವಕಾಶ ನಮ್ಮ ಮುಂದೆ ಇದೆ ಎಂದಾದಾಗ ನಮ್ಮ ಬಳಿ ಸೇವಿಂಗ್ಸ್ ಇದ್ದರೆ ಮಾತ್ರ ನಾವು ಅಂತಹ ಅವಕಾಶವನ್ನು ಧೈರ್ಯವಾಗಿ ತೆಗೆದುಕೊಳ್ಳಲು ಸಾಧ್ಯ. ಇಂತಹ ಅವಕಾಶ ನಮ್ಮ ಮುಂದೆ ಬಂದಾಗ ನಮ್ಮ ಬಳಿ ಕೂಡಿಟ್ಟ ಯಾವುದೇ ಹಣ ಇಲ್ಲ ಎಂದಾದರೆ ನಾವು ಅಂತಹ ಅವಕಾಶವನ್ನು ಬದುಕಿನಲ್ಲಿ ಕಳೆದುಕೊಳ್ಳಬೇಕಾಗುತ್ತದೆ.
ಬೇಗನೇ ರಿಟೈರ್ ಆಗಿ
ಇಂದಿನ ಫಾಸ್ಟ್ ಯುಗದ ಸ್ಟ್ರೆಸ್ (Stress) ಹೆಚ್ಚುಕಾಲ ಯಾರಿಗೂ ಬೇಡವಾಗಿರುತ್ತದೆ. ಎಲ್ಲಾದರೂ ಸರಿ ಒಂದು ಚಿಕ್ಕ ಮನೆ ಮಾಡಿ ತಿಂಗಳಿಗೆ ಇಂತಿಷ್ಟು ಎಂದು ಹಣ ಬರುತ್ತಿದ್ದರೆ ಸಾಕು ಕೆಲಸ ಬಿಟ್ಟು ಹೋಗುತ್ತೇನೆ ಎನ್ನುವರೇ ಜಾಸ್ತಿ. ಹೀಗೆ ನೀವೂ ಬೇಗ ರಿಟಾಯರ್ಡ್ ಆಗಬೇಕು ಎಂದಾದರೆ ನಿಮ್ಮ ಬಳಿ ಆರ್ಥಿಕ ಸ್ಥಿರತೆ ಇದ್ದರೆ ಮಾತ್ರ ಸಾಧ್ಯ. ಪ್ರತಿ ವರ್ಷ ಹೆಚ್ಚಾಗುವ ಖರ್ಚುಗಳನ್ನು ಲೆಕ್ಕಹಾಕಿ ನಾವು ರಿಟಾಯರ್ಡ್ ಆಗಬೇಕಾದರೆ ದೊಡ್ಡ ಮೊತ್ತ ನಮ್ಮ ಬಳಿ ಇರಬೇಕು. ಆ ದೊಡ್ಡ ಮೊತ್ತದ ಮೊದಲ ಹೆಜ್ಜೆ ನಮ್ಮ ಇಂದಿನ ಸೇವಿಂಗ್ಸ್ ಆಗಿರಬೇಕು.
ನಿಮಗಿದು ಗೊತ್ತೇ ?
ಇನ್ ಫ್ಲೇಷನ್ (Inflation) ನ ದರಗಳ ಪ್ರಕಾರ ನಿಮ್ಮ ಇಂದಿದ ವಾರ್ಷಿಕ ಖರ್ಚಿನ 30 ಪಟ್ಟು ಹಣ ನಿಮ್ಮಲ್ಲಿದ್ದರೆ ಮಾತ್ರ ನಿಮ್ಮ ರಿಟಾಯರ್ಡ್ ಲೈಫ್ ಆರಾಮದಾಯಕ ಆಗಿರುತ್ತದೆ. ಆಗ ನಿಮ್ಮ ಲೈಫ್ ಸ್ಟೈಲ್ ನಲ್ಲಿ ಬದಲಾವಣೆ ಬೇಕಾಗುವುದಿಲ್ಲ. ಅಂದರೆ ನಿಮ್ಮ ವಾರ್ಷಿಕ ಖರ್ಚು 6 ಲಕ್ಷ ಇದ್ದರೆ ನಿಮ್ಮ ಬಳಿ ರಿಟಾಯರ್ಡ್ ಆಗುವಾಗ 1.8 ಕೋಟಿ ಇರಬೇಕಾಗುತ್ತದೆ.
ಹಾಗಾದರೆ ನಾವು ಹಣವನ್ನು ಎಲ್ಲಿ ಹೂಡಿಕೆ ಮಾಡಲು ಆರಂಭ ಮಾಡಬಹುದು ಎಂದು ನೋಡೋಣ
ಮ್ಯೂಚುವಲ್ ಫಂಡ್ಸ್ (Mutual Funds) ಅಥವಾ ಎಸ್ಐಪಿ (SIP)
ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ, ಯಾವ ಶೇರಿನ ಮೇಲೆ ಹೂಡಿಕೆ ಮಾಡಬೇಕು ಎನ್ನುವುದು ತಿಳಿಯದೆ ಇದ್ದಲ್ಲಿ ಮ್ಯೂಚುವಲ್ ಫಂಡ್ಸ್ ನಿಮಗೆ ಉತ್ತಮ ಆಯ್ಕೆ. ಇಲ್ಲಿ ನಿಮ್ಮ ಬಳಿ ಇರುವ ಸೇವಿಂಗ್ಸ್ ಅನ್ನು ಒಂದೇ ಬಾರಿಗೆ ಹೂಡಿಕೆ ಮಾಡಬಹುದು ಅಥವಾ ಪ್ರತಿ ತಿಂಗಳು ಚಿಕ್ಕ ಮೊತ್ತದ ಎಸ್ಐಪಿ ಯನ್ನು ಕೂಡ ಆರಂಭಿಸಬಹುದು.
ಇದನ್ನೂ ಓದಿ – ಎಲ್.ಐ.ಸಿ. ಯ ಉತ್ತಮ ಪ್ಲಾನ್ ಗಳು
ಫಿಕ್ಸೆಡ್ ಡೆಪಾಸಿಟ್ (Fixed Deposits)
ನಿಮಗೆ ರಿವಾರ್ಡ್ ಕಮ್ಮಿ ಇದ್ದರೂ ಪರವಾಗಿಲ್ಲ ನೀವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲ ಎಂದಾದರೆ ಫಿಕ್ಸೆಡ್ ಡೆಪಾಸಿಟ್ ಅಥವಾ ಎಫ್ ಡಿ (FD) ಉತ್ತಮ ಆಯ್ಕೆ. ನಿಗದಿತ ಬಡ್ಡಿಯೊಂದಿಗೆ, ನಿರ್ಧಾರಿತ ಸಮಯದಲ್ಲಿ ನಿಮ್ಮ ಅಸಲು ಬಡ್ಡಿಯ ಸಮೇತ ನಿಮ್ಮ ಕೈ ಸೇರುತ್ತದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (Public Provident Fund – PPF)
ಎಲ್ಲಾ ಬ್ಯಾಂಕುಗಳಲ್ಲಿಯೂ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆಗಳನ್ನು ನಾವು ಆರಂಭಿಸಬಹುದು. ನಿಮ್ಮ ಬಳಿ ಪಿಎಫ್ (PF) ಇದ್ದರೂ ಸರಿ ಇನ್ನೊಂದು ಪಿಪಿಎಫ್ (PPF) ಅಕೌಂಟ್ ಅನ್ನು ಓಪನ್ ಮಾಡಿ ಅದರಲ್ಲಿ ನಿಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ಹಣವನ್ನು ಪ್ರತಿವರ್ಷ ಸೇವ್ ಮಾಡಬಹುದು. ಇದು ಕೆಲವು ವರ್ಷಗಳ ಲಾಕ್ ಇನ್ ಪಿರಿಯಡ್ ನೊಂದಿಗೆ ಬರುವುದರಿಂದ ಹಣವನ್ನು ತೆಗೆದು ಖರ್ಚು ಮಾಡುವುದು ಕೂಡ ತಪ್ಪುತ್ತದೆ. ಇದು ಟಾಕ್ಸ್ ಸೇವಿಂಗ್ ಆಯ್ಕೆಯೂ ಹೌದು
ಇದಲ್ಲದೆ ಬಾಂಡ್ಸ್ ಗಳು (Bonds) ನ್ಯಾಷನಲ್ ಪೆನ್ಷನ್ ಸ್ಕೀಮ್ (National Pension Scheme – NPS) ಪೋಸ್ಟ್ ಆಫೀಸ್ ಡೆಪಾಸಿಟ್ಗಳು (Post Office Deposits), ರಿಯಲ್ ಎಸ್ಟೇಟ್ (Real Estate) ಮುಂತಾದ ಕಡೆಯೂ ಕೂಡ ನೀವು ಹೂಡಿಕೆಯನ್ನು ಮಾಡಬಹುದು. ಮೊದಲು ಸೇವಿಂಗ್ಸ್ ಆರಂಭಿಸಿ ನಂತರ ಹೂಡಿಕೆಗಳಿಗೆ ದಾರಿ ತನ್ನಿಂದ ತಾನೇ ತೆರೆದುಕೊಳ್ಳುತ್ತದೆ.
ನಿಮ್ಮ ಉಳಿತಾಯ ಮತ್ತು ಹೂಡಿಕೆಯ ದಾರಿ ಸುಗಮವಾಗಿರಲಿ, ಆಲ್ ದ ಬೆಸ್ಟ್.