Instant Personal Loan by Google Pay: ಗೂಗಲ್ ಪೇ ಯ ಸಾಚೆಟ್ ಲೋನ್

Instant Personal Loan by Google Pay

ಸಣ್ಣ ಪುಟ್ಟ ಹಣದ ಅಗತ್ಯ ಎಲ್ಲರಿಗೂ ಇದ್ದೇ ಇರುತ್ತದೆ. ಆಗ ಯಾವುದೋ ದೊಡ್ಡ ಸಾಲದ ಮೊರೆ ಹೋಗುವ ಬದಲು ಇರುವ ಚಿಕ್ಕ ಅಗತ್ಯಗಳನ್ನು ಸಣ್ಣ ಸಾಲವನ್ನು (Instant Personal Loan by Google Pay) ಪಡೆದು ನಿಭಾಯಿಸಿಕೊಂಡರೆ ಉತ್ತಮ. ಈಗ ಗೂಗಲ್ ಪೇ ಇಂತಹುದೇ ಆಯ್ಕೆಯನ್ನು ನೀಡುತ್ತಿದೆ.  ಗೂಗಲೆ ಪೇ  ಅವರು ಡಿಎಂಐ ಫೈನಾನ್ಸ್ (DMI Finance) ಅವರ ಸಹಯೋಗದೊಂದಿಗೆ ಸಾಚೆಟ್ ಲೋನ್ ಅನ್ನು ಗೂಗಲ್ ಪೇ ಅಥವಾ ಜಿ. ಪೇ ಗ್ರಾಹಕರಿಗಾಗಿ ಪ್ರಾರಂಭಿಸಿದೆ.

ಇದೊಂದು ನಮ್ಮ ಹಣಕಾಸಿನ ವಹಿವಾಟಿನ ರೆಕಾರ್ಡ್ ಗಳ ಆಧಾರದಲ್ಲಿ ಮೊದಲೇ ಅಪ್ರೂವ್ ಆಗಿರುವ (Pre-approved Loan) ಲೋನ್ ಆಗಿದ್ದು (Instant Personal Loan by Google Pay) ಸಣ್ಣ ವ್ಯಾಪಾರ ವ್ಯವಹಾರ ನಡೆಸುವವರಿಗಾಗಿ 15,000 ರೂ. ವರೆಗೆ ಸಾಲವನ್ನು ನೀಡುವ ಯೋಜನೆಯಾಗಿದೆ. ಹೀಗೆ ಪಡೆದುಕೊಂಡ ಸಾಲಕ್ಕೆ 7 ರಿಂದ 12 ತಿಂಗಳು ಮರುಪಾವತಿಯ ಅವಧಿಯನ್ನೂ ನೀಡಲಾಗುತ್ತದೆ.

Instant Personal Loan by Google Pay

Instant Personal Loan by Google Pay – ವಿವರಗಳು

ಗೂಗಲ್ ಪೇ ಸಾಲದ ಬಗ್ಗೆ ವಿವರಗಳು :

  • ಸಾಲದ ಗರಿಷ್ಟ ಮೊತ್ತ -15 ಸಾವಿರ ರೂಪಾಯಿಗಳ ತನಕ
  • ವಾರ್ಷಿಕ ಬಡ್ಡಿಯ ದರ – ಶೇಕಡ 14 ರಿಂದ 36
  • ಮರುಪಾವತಿ ಅವಧಿ – 7 ರಿಂದ 12 ತಿಂಗಳು
  • ವಯೋಮಿತಿ –  18 ವರ್ಷದ ಮೇಲ್ಪಟ್ಟು
  • ಆದಾಯ ದಾಖಲೆಗಳು – ಯಾವುದೇ ಆದಾಯದ ದಾಖಲೆಗಳು ಬೇಕಾಗಿಲ್ಲ

ಗೂಗಲ್ ಪೇ ಸಾಲದ ವೈಶಿಷ್ಟ್ಯತೆಗಳು (Google Pay Instant Personal Loan Benefits)

ಸ್ವಂತ ಉದ್ಯೋಗ ನಡೆಸುವವರು ಈ ಸಾಲವನ್ನು ಪಡೆದುಕೊಳ್ಳಬಹುದು. ಇದು ತಕ್ಷಣ ಸಿಗುವ ಸಾಲವಾಗಿದ್ದು 15 ಸಾವಿರದ ವರೆಗೆ ಕ್ಷಣಮಾತ್ರದಲ್ಲಿ ನಿಮ್ಮ ಅಕೌಂಟ್ ಗೆ ಬರುತ್ತದೆ ಮತ್ತು ನಿಮ್ಮ ಹಣದ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಈ ಸಾಲದಲ್ಲಿ ನಿರ್ವಹಣಾ ಶುಲ್ಕ ಅಥವಾ ಪ್ರೊಸೆಸಿಂಗ್ ಫೀ ಇದ್ದು, ಇದು ನೀವು ತೆಗೆದುಕೊಂಡ ಸಾಲದ ಮೊತ್ತದ ಮೇಲೆ 5% ಮತ್ತು ಅದರ ಮೇಲೆ ಜಿ.ಎಸ್.ಟಿ ಯನ್ನು ಸೇರಿಸಲಾಗುತ್ತದೆ.

ಇದನ್ನೂ ಓದಿ – ಹಣ ಉಳಿಸಿ

ಗೂಗಲ್ ಪೇ ಸಾಜೆಟ್ ಲೋನ್ (sachet loan) ಪೇಪರ್ ಲೆಸ್ ಆಗಿದೆ. ಇದು ಕೇಅಲ ಡಿಜಿಟಲ್ ರೂಪದಲ್ಲಿ ಸಿಗುವ ಸಾಲ. ಯಾವುದೇ ಕಾಗದ ಪತ್ರಗಳನ್ನು ಹಾಜರುಪಡಿಸದೆ ಈ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯ ಇದೆ. ಸಾಲ ಮರುಪಾವತಿಯ ಅವಧಿ 7 ರಿಂದ 12 ತಿಂಗಳು ಆಗಿದೆ. ನಿಮ್ಮ ಬಳಿ ಮುಂದಿನ ಒಂದೆರಡು ತಿಂಗಳುಗಳಲ್ಲಿ ಖಂಡಿತ ಸ್ವಲ್ಪ ಹಣ ಜಮೆ ಆಗುತ್ತದೆ ಎಂದಾದಲ್ಲಿ ಕಡಿಮೆ ಇ.ಎಮ್.ಐ ಅವಧಿ ಆಯ್ಕೆ ಮಾಡಿಕೊಂಡು ಕಡಿಮೆ ಬಡ್ಡಿ ಕಟ್ಟಬಹುದು ಅಥವಾ ಇಲ್ಲವಾದಲ್ಲಿ ಹೆಚ್ಚಿನ ಅವಧಿಯನ್ನು ಆಯ್ಕೆ ಮಾಡಿಕೊಂಡರೆ ಸಣ್ಣ ಕಂತುಗಳಲ್ಲಿ ಮರುಪಾವತಿ ಬರುವುದರಿಂದ ನಿಮಗೆ ಮಾಸಿಕ ಸಾಲ (EMI) ಕಟ್ಟಲು ಸುಲಭವಾಗುತ್ತದೆ.

Google pay sachet loan ಮಂಜೂರಾತಿ ಮತ್ತು ಬಡ್ಡಿಯ ದರಗಳು

ಗೂಗಲ್ ಪೇ ಸಾಚೆಟ್ ಲೋನ್ ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ ಎನ್ನುವುದೇ ವಿಶೇಷ. ಆದರೆ ನೀವು ಗೂಗಲ್ ಪೇ (Instant Personal Loan by Google Pay)ಯ  ಗ್ರಾಹಕರಾಗಿರಬೇಕು. ಹೀಗಿದ್ದಲ್ಲಿ ನೀವು ಈ ಸಾಲವನ್ನು ಪಡೆಯುವ ಅರ್ಹತೆ ನಿಮ್ಮ ಬಳಿ ಬರುತ್ತದೆ. ಇನ್ನು ಬಡ್ಡಿಯ ದರ (Yearly Interest)  14% ರಿಂದ 36% ಚಾರ್ಜ್ ಮಾಡಲಾಗುತ್ತದೆ.

ಗೂಗಲ್ ಪೇ ಚಾಟ್ ಸ್ಯಾಜೆಟ್ ಲೋನ್ ಪಡೆಯಲು ಬೇಕಾದ ಅರ್ಹತೆಗಳು (Eligibility for Google Pay Instant Personal Loan)

  1. ಭಾರತೀಯ ಪ್ರಜೆಯಾಗಿರಬೇಕು
  2. 18 ವರ್ಷದ ಮೇಲ್ಪಟ್ಟವರಾಗಿರಬೇಕು
  3. ಈ ಹಿಂದೆ ಯಾವುದೇ ಸಾಲವನ್ನು ಪಡೆದುಕೊಂಡು ಬಾಕಿ ಉಳಿಸಿಕೊಂಡವರಾಗಿರಬಾರದು.
  4. ಮೊಬೈಲ್ ನಂಬರ್ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಆಗಿರಬೇಕು.
  5. ಸಾಫ್ಟ್ ಕಾಪಿ ಅಪ್ಲೋಡ್ ಮಾಡಬೇಕು – ಇದು ಡಿಜಿಟಲ್ ಲೋನ್ ಆಗಿರುವುದರಿಂದ ಸಾಲವನ್ನು ಪಡೆಯುವವರು ತಮ್ಮInstant Personal Loan by Google Pay ಎಲ್ಲಾ ಮಾಹಿತಿಗಳನ್ನು / ದಾಖಲೆಗಳನ್ನು (Documents) ಅಪ್ಲೋಡ್ ಮಾಡಿದರೆ ಸಾಕು.
  6. ಅಪ್ಲೋಡ್ ಮಾಡಬೇಕಾದ ದಾಖಲೆಗಳು: ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡನ್ನು ಅಪ್ಲೋಡ್ ಮಾಡಬೇಕು.
  7. ನಿಮ್ಮ ಚಾಲ್ತಿಯಲ್ಲಿ ಇರುವ ಬ್ಯಾಂಕ್ ಅಕೌಂಟ್

ಗೂಗಲ್ ಪೇ ಸ್ಯಾಚೆಟ್ ಲೋನ್  ಶುಲ್ಕಗಳು (Google Pay Instant Personal Loan Processing fee)

  • ಪ್ರೋಸೆಸಿಂಗ್ ಫೀಸ್ (Processing fee) ಅಥವಾ ನಿರ್ವಹಣಾ ಶುಲ್ಕ ನೀವು ಪಡೆದುಕೊಳ್ಳುವ ಮೊತ್ತದ ಮೇಲೆ 5% ಚಾರ್ಜ್ ಮಾಡಲಾಗುತ್ತದೆ. ಇದರ ಮೇಲೆ ಜಿ ಎಸ್ ಟಿ ಯನ್ನು ಪಾವತಿಸಬೇಕು.
  • ಮಾಸಿಕ ಕಂತು ಕಟ್ಟಲು ತಡ ಮಾಡಿದರೆ ಸಂಸ್ಥೆಯು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಂಡು ಹೆಚ್ಚುವರಿ ಬಡ್ಡಿಯನ್ನು ವಿಧಿಸುತ್ತದೆ.

ಗೂಗಲ್ ಪೇ ಸ್ಯಾಚೆಟ್ ಸಾಲವನ್ನು ಪಡೆಯಲು ಅಪ್ಲೈ ಮಾಡುವ ವಿಧಾನ (How to apply Google Pay Instant Personal Loan)

  • ಗೂಗಲ್ ಪೇ ಬಿಸಿನೆಸ್ ಆಪ್ (Business App) ಅನ್ನು ಡೌನ್ಲೋಡ್ ಮಾಡಿಕೊಳ್ಳಿ
  • ಈಗ ನೀವು ಗೂಗಲ್ ಪೇ ಲೋನ್ ಸೆಕ್ಷನ್ ಗೆ ಹೋಗಿ
  • ಆಫರ್ ಟ್ಯಾಬ್ (Offer Tab) ನ ಮೇಲೆ ಕ್ಲಿಕ್ ಮಾಡಿ
  • ಇಲ್ಲಿ ನಿಮ್ಮ ಸಾಲ ಪಡೆಯುವ ಮೊತ್ತದ ಅರ್ಹತೆ ನಿಮಗೆ ಕಾಣುತ್ತದೆ
  • ನಿಮಗೆ ಆ ಸಾಲದ ಮೊತ್ತ ಸಾಕು ಎಂದಾದಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ಕೂಡಲೆ ಹಣ ನಿಮ್ಮ ಅಕೌಂಟ್ ಸೇರಿರುತ್ತದೆ.

ಇಷ್ಟು ಮಾಡಿದರೆ ಸುಲಭ ಸಾಲ ನಿಮ್ಮ ಕೈಯಲ್ಲಿರುತ್ತದೆ (Instant Personal Loan by Google Pay).

 

Leave a Reply

Your email address will not be published. Required fields are marked *