Best Loan App for Students ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಾಲ ನೀಡುವ ಆಪ್ ಗಳು

Best Loan App for Students

ವಿದ್ಯಾರ್ಥಿ ಆಗಿರಬೇಕಾದರೆ ಹಲವಾರು ಬಾರಿ ಹಣದ ಅಗತ್ಯ (Best Loan App for Students) ಬಂದೇ ಬರುತ್ತದೆ. ನಮ್ಮ ಪಾಲಕರು ಅಥವಾ ಪೋಷಕರು ಈ ಹಣದ ಅಗತ್ಯಗಳನ್ನು ಪೂರೈಸ ಬಲ್ಲವರಾಗಿದ್ದರೆ ಖಂಡಿತವಾಗಿಯೂ ನಾವು ಅವರಿಂದ ಸಹಾಯ ಪಡೆದು ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಆದರೆ ಇಂತಹ ಪರಿಸ್ಥಿತಿ ಇಲ್ಲದ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಯಾವುದಾದರೂ ಒಂದು ಫ್ರೀಲ್ಯಾನ್ಸಿಂಗ್ ಅಥವಾ ಪಾರ್ಟ್ ಟೈಮ್ ಕೆಲಸ ಮಾಡಿ ಹಣದ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಾರೆ.

ಹೀಗೆ, ವಿದ್ಯಾರ್ಥಿ ಆಗಿರಬೇಕಾದರೆ ಫ್ರೀಲ್ಯಾನ್ಸಿಂಗ್ ಅಥವಾ ಯಾವುದಾದರೂ ಪಾರ್ಟ್ ಟೈಮ್ ಕೆಲಸ ಮಾಡಿ ಕೂಡಿಟ್ಟ ಹಣ ಹಲವಾರು ಬಾರಿ ಬಹಳ ಸಹಾಯಕ್ಕೆ ಬರುತ್ತದೆ. ಆದರೆ ಇನ್ನೂ ಕೆಲವು ಬಾರಿ ಅಗತ್ಯಗಳು ಹೇಳಿ ಕೇಳಿ ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ನಮಗೆ ತ್ವರಿತವಾಗಿ ಹಣ (Best Loan App for Students) ಬೇಕಾಗಿರುತ್ತದೆ.

Best Loan App for Students

ಹಲವಾರು ವಿದ್ಯಾರ್ಥಿಗಳು ಪಾಲಕರಲ್ಲೇ ಆಗಲಿ ಅಥವಾ ಗೆಳೆಯರಲ್ಲೇ ಆಗಲಿ ಹಣ ಕೇಳಲು ಸಿದ್ಧರಿರುವುದಿಲ್ಲ. ತಮ್ಮ ಹಣದ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬೇಕು ಎಂಬ ಛಲ ಇದ್ದೇ ಇರುತ್ತದೆ. ಹೀಗಿರಬೇಕಾದರೆ ಯಾರ ಬಳಿಯಾದರೂ ಕೈ ಚಾಚುವ ಬದಲಿಗೆ ಹಲವಾರು ಆಪ್ (App) ಗಳು ಈಗ ವಿದ್ಯಾರ್ಥಿಗಳಿಗಾಗಿ ಸಾಲದ ಸೌಲಭ್ಯಗಳನ್ನು ನೀಡುತ್ತವೆ. ಇಂತಹ ಕಡೆಯಿಂದ ಸಾಲ ಪಡೆದು ಮರುಪಾವತಿ ಮಾಡುವುದು ಉತ್ತಮ ಆಯ್ಕೆ ಆಗಿರುತ್ತದೆ.

ಇನ್ನು ಹಲವು ಬಾರಿ ವಿದ್ಯಾರ್ಥಿ ಜೀವನದ ಕೊನೆಯ ಘಟ್ಟದಲ್ಲಿ ಯಾವುದೋ ಒಂದು ಪ್ರಾಜೆಕ್ಟ್ ಮಾಡಬೇಕು ಎಂಬ ನಿಯಮ ಇರುತ್ತದೆ. ಇದಕ್ಕಾಗಿ ಬಹಳಷ್ಟು ಹಣ ಖರ್ಚಾಗುವುದು ಸುಳ್ಳಲ್ಲ. ಹೀಗೆ ವೃತ್ತಿ ಜೀವನದ ಆರಂಭ ಮಾಡಬೇಕು ಎನ್ನುವ ವಿದ್ಯಾರ್ಥಿಗಳಿಗೆ ಇಂತಹ ಆಪ್ ಗಳು ಸಹಾಯ ಮಾಡುತ್ತದೆ. ಹೇಗೂ ಮುಂದಿನ ಕೆಲವು ತಿಂಗಳುಗಳಲ್ಲಿ ಕೆಲಸ ಸಿಕ್ಕಿ ಸಂಪಾದನೆ ಆರಂಭವಾಗುವುದರಿಂದ (Save Early –  Grow More) ಈ ಸಾಲದ ಮರುಪಾವತಿ ಅಷ್ಟೇನೂ ಕಷ್ಟ ಆಗುವುದಿಲ್ಲ.

ಹಾಗಾದರೆ ಯಾವ ಇಂತಹ ಆಪ್ (Best Loan App for Students) ಗಳು ವಿದ್ಯಾರ್ಥಿಗಳಿಗೆ ಸಾಲದ ಸೌಲಭ್ಯಗಳನ್ನು ನೀಡುತ್ತಿವೆ, ಅದರ ಫೀಚರ್ಸ್ ಗಳು ಏನು, ಎಷ್ಟರ ವರೆಗೆ ಸಾಲ ಸೌಲಭ್ಯ ಸಿಗುತ್ತದೆ, ಮರುಪಾವತಿ ಆಯ್ಕೆಗಳು ಹೇಗಿರುತ್ತದೆ ಎಂಬ ಬಗ್ಗೆ ವಿವರವಾಗಿ ಈಗ ನೋಡೋಣ.

Best Loan App for Students

ಸ್ಟು ಕ್ರೆಡ್ (StuCred)

ಈ ಆಪ್ ವಿದ್ಯಾರ್ಥಿಗಳಿಗಾಗಿ 15,000 ತನಕದ ಪರ್ಸನಲ್ ಲೋನ್ ಅನ್ನು ನೀಡುತ್ತದೆ. ವಿದ್ಯಾರ್ಥಿ ಎಷ್ಟು ಸಾಲವನ್ನು ಪಡೆದಿದ್ದಾನೆ ಅಷ್ಟೇ ಸಾಲದ ಮೇಲೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಈ ಆಪ್ ನ ಸರ್ವಿಸ್ ಚಾರ್ಜಸ್ ಆರು ಪರ್ಸೆಂಟ್ (6%) ಆಗಿದೆ ಹಾಗೂ ಸರಿಯಾದ ಸಮಯದಲ್ಲಿ ಲೋನ್ ಪಾವತಿ ಮಾಡದೇ ಇದ್ದಲ್ಲಿ ಲೇಟ್ ಪೇಮೆಂಟ್ ಚಾರ್ಜಸ್ ಗಳನ್ನು ಕೂಡ ವಿಧಿಸಲಾಗುತ್ತದೆ.

ಎಜುವಾನ್ಜ್ (Eduvanz)

ಈ ಆಪ್ ಹೆಚ್ಚಿನ ಮೊತ್ತದ ವೈಯಕ್ತಿಕ ಸಾಲವನ್ನು ನೀಡುತ್ತದೆ. 10 ಲಕ್ಷದ ತನಕದ ಸಾಲ ಸೌಲಭ್ಯವನ್ನು ಈ ಆಪ್ ನೀಡುತ್ತದೆ. 0% ಯಿಂದ ಆರಂಭವಾಗಿ 36% ತನಕದ ಬಡ್ಡಿಯ ದರದ ಆಯ್ಕೆಗಳು ಇಲ್ಲಿವೆ. ಕನಿಷ್ಠ ಮೂರು ತಿಂಗಳುಗಳು ಹಾಗೂ ಗರಿಷ್ಠ 84 ತಿಂಗಳ ಸಾಲ ಸೌಲಭ್ಯವನ್ನು ನೀಡುತ್ತದೆ. ಇಲ್ಲಿ ಯಾವುದೇ ತರಹದ ಕೋಲಾಟರಲ್ ಅನ್ನು ಕೇಳಲಾಗುವುದಿಲ್ಲ.

ಎಂ ಪಾಕೆಟ್ (mPokket)

ಈ ಆಪ್ ನಲ್ಲಿ ವಿದ್ಯಾರ್ಥಿಗಳು 500 ರೂಪಾಯಿಯಿಂದ ಆರಂಭವಾಗಿ 30,000ಗಳ ತನಕದ ಸಾಲವನ್ನು ಪಡೆಯಬಹುದು. ಇಲ್ಲಿ ಪ್ರತಿ ತಿಂಗಳು ಗರಿಷ್ಟ 4% ಬಡ್ಡಿಯ ದರಗಳನ್ನು ವಿಧಿಸಲಾಗುತ್ತದೆ. 60 ದಿನಗಳಿಂದ 120 ದಿನಗಳ ತನಕದ ಸಾಲ ಮರುಪಾವತಿ ಅವಧಿ ಇರುತ್ತದೆ. ಇಲ್ಲಿಯೂ ಕೂಡ ಅತಿ ಕಡಿಮೆ ದಾಖಲೆಗಳನ್ನು ಕೇಳಲಾಗಿ ತ್ವರಿತವಾಗಿ ಸಾಲ ಮಂಜೂರಾತಿ ಆಗುತ್ತದೆ.

ಕ್ಯಾಶ್ ಇ (CashE)

ಕ್ಯಾಶ್ ಇ ಇನ್ನೊಂದು ವೈಯಕ್ತಿಕ ಸಾಲವನ್ನು ನೀಡುವ ಆಪ್ ಆಗಿದ್ದು ಇಲ್ಲಿ ಒಂದು ಸಾವಿರ ರೂಪಾಯಿಗಳಿಂದ ನಾಲ್ಕು ಲಕ್ಷ ರೂಪಾಯಿಗಳ ತನಕ ವಿದ್ಯಾರ್ಥಿ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಇಲ್ಲಿ ಬಡ್ಡಿಯ ದರಗಳು ವಾರ್ಷಿಕ 31 ಶೇಕಡಾದಷ್ಟು ಇದೆ. ಇಲ್ಲಿ ಸಾಲ ಪಡೆದ ಮೂರು ತಿಂಗಳುಗಳು ಕಾಲ ಯಾವುದೇ ರೀತಿಯ ಮರುಪಾವತಿ ಇರುವುದಿಲ್ಲ. ಅದಾದ ನಂತರ ಸಾಲವನ್ನು ಮರುಪಾವತಿ ಮಾಡಲು ಆರಂಭಿಸಬೇಕಾಗುತ್ತದೆ. ಇದು ಕೂಡ ಕಡಿಮೆ ದಾಖಲೆಗಳನ್ನು ಕೇಳಿ ತ್ವರಿತವಾಗಿ ಸಾಲವನ್ನು ನೀಡುವ ಆಪ್ ಆಗಿದೆ.

ಪಾಕೆಟ್ಲಿ (Pocketly)

ಪಾಕೆಟ್ಲಿ ವಿದ್ಯಾರ್ಥಿಗಳಿಗಾಗಿ ಸಾಲ ನೀಡುವ ಮತ್ತೊಂದು ಆಪ್ ಆಗಿದ್ದು ಇಲ್ಲಿ 500 ರೂಪಾಯಿಗಳಿಂದ ಆರಂಭವಾಗಿ 50,000 ಗಳವರೆಗೆ ಸಾಲವನ್ನು ನೀಡಲಾಗುತ್ತದೆ. ಮರುಪಾವತಿಯ ಅವಧಿಗಳು 61 ದಿನಗಳಿಂದ ಆರಂಭವಾಗಿ 120 ದಿನಗಳ ತನಕ ಇರುತ್ತದೆ. ಇಲ್ಲಿ ವಾರ್ಷಿಕ ಬಡ್ಡಿಯ ದರಗಳು 24 ಶೇಕಡ ಇರುತ್ತವೆ.

ವಿದ್ಯಾರ್ಥಿಗಳು ಸಾಲವನ್ನು ಪಡೆಯಬೇಕಾದಾಗ ಗಮನಿಸಬೇಕಾದ ಕೆಲವು ವಿಷಯಗಳು (Best Loan App for Students).

Best Loan App for Students

ಬಡ್ಡಿಯ ದರಗಳು

ಸಾಲ ಪಡೆಯಬೇಕಾದರೆ ನಾವು ಎಷ್ಟು ತಿಂಗಳಲ್ಲಿ ಸಾಲವನ್ನು ಮರುಪಾವತಿ ಮಾಡುತ್ತೇವೆ ಎಂದು ಯೋಜನೆಯ ಆಧಾರದಲ್ಲಿ ಬಡ್ಡಿಯ ದರಗಳನ್ನು ಯಾರು ಉತ್ತಮವಾಗಿ ಕೊಡುತ್ತಾರೋ ಅಂತಹ ಆಪ್ ನ ಮೂಲಕ ಸಾಲ ಪಡೆಯುವುದು ಉತ್ತಮ. ಕೂಡಲೇ ಮರುಪಾವತಿ ಮಾಡಬಹುದು ಎಂದು ಅನಿಸಿದಾಗ ಬಹಳ ದೀರ್ಘಕಾಲದ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಾರದು. ಇದರಲ್ಲಿ ಹೆಚ್ಚಿನ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

ಹಣದ ಅಗತ್ಯದ ಅರಿವು

ನೀವು ಪಡೆಯುತ್ತಿರುವ ಸಾಲ ನಿಜವಾಗಿಯೂ ನಿಮಗೆ ಅಗತ್ಯ ಇದೆಯೇ ಎಂದು ಎರಡು ಬಾರಿ ಯೋಚಿಸಿ ಸಾಲವನ್ನು ಪಡೆದರೆ ಉತ್ತಮ. ಯಾಕೆಂದರೆ ವಿದ್ಯಾರ್ಥಿ ಆಗಿರಬೇಕಾದರೆ ಸಾಮಾನ್ಯವಾಗಿ ಯಾವುದೇ ಆದಾಯ ನಮ್ಮ ಬಳಿ ಇರುವುದಿಲ್ಲ ಯಾವುದೊ ಫ್ರೀಲಾನ್ಸಿಂಗ್ ಅಥವಾ ಪಾರ್ಟ್ ಟೈಮ್ ಕೆಲಸ ಮಾಡಿ ಕೂಡಿಟ್ಟ ಹಣ ದುಂದು ವೆಚ್ಚ ಮಾಡುವ ಬದಲು ನಿಜವಾಗಿ ಅಗತ್ಯ ಇದ್ದ ಕಡೆ ಬಳಸಿಕೊಳ್ಳಬೇಕು. ಇದನ್ನು ಮೀರಿ ಹಣದ ಅಗತ್ಯ ಬಂದಾಗ ಮಾತ್ರ ಸಾಲದ ಮೊರೆ ಹೋಗುವುದು ಉತ್ತಮ.

ಟರ್ಮ್ಸ್ ಮತ್ತು ಕಂಡಿಶನ್ಗಳನ್ನು ಓದಿಕೊಳ್ಳಿ

ಸಾಲವನ್ನು ಪಡೆಯುವಾಗ ಸಾಲ ನೀಡುವ ಆಪ್ (Best Loan App for Students) ಗಳು ತಮ್ಮ ಟರ್ಮ್ಸ್ ಮತ್ತು ಕಂಡೀಶನ್ ಗಳನ್ನು ನಮೂದಿಸಿರುತ್ತಾರೆ. ಅದನ್ನು ಓದದೆ ಓಕೆ ಎಂದು ಕ್ಲಿಕ್ ಕೊಡುವ ಬದಲಿಗೆ ಅದರಲ್ಲಿ ಯಾವ ನಿಯಮಗಳು ಹಾಗೂ ಷರತ್ತುಗಳನ್ನು ವಿಧಿಸಲಾಗಿದೆ ಎಂಬುದನ್ನು ಓದಿಕೊಳ್ಳಿ. ನಿಮ್ಮ ಯಾವುದೇ ದಾಖಲೆಗಳು ಅವರ ಬಳಿ ಇಲ್ಲವಾದರೂ ಮುಂದೆ ನಮ್ಮ ಯಾವುದೇ ದಾಖಲೆಗಳನ್ನು ಅವರು ಪಡೆಯುವಂತೆ ಇರಬಾರದು.

ಪ್ರೋಸೆಸಿಂಗ್ ಫೀ ಮತ್ತು ಸಾಲ ಸಿಗುವ ಸಮಯ

ಸಾಮಾನ್ಯವಾಗಿ ಇನ್ಸ್ಟಂಟ್ ಲೋನ್ ನ ಅಗತ್ಯ ಬರುವುದು ಹೇಳಿ ಕೇಳಿಯಲ್ಲ. ಆದರೆ ಸಾಲ ನೀಡುವವರು ಎಷ್ಟು ದಿನಗಳಲ್ಲಿ ಸಾಲ ನೀಡುತ್ತಾರೆ ಹಾಗೂ ಪ್ರೋಸೆಸಿಂಗ್ ಫೀ ಎಷ್ಟು ಇರುತ್ತದೆ ಎಂಬುದನ್ನು ನೋಡಿಕೊಂಡು ಸಾಲ ಎಲ್ಲಿ ಪಡೆಯಬೇಕು ನಿರ್ಧರಿಸಿ. ಅನಗತ್ಯವಾಗಿ ಹೆಚ್ಚಿನ ಮೊತ್ತದ ಸಾಲ ಪಡೆದು ಹೆಚ್ಚಿನ ಪ್ರೊಸೆಸಿಂಗ್ ಫೀ ಕಟ್ಟಬೇಡಿ.

ಇದನ್ನೂ ಓದಿ – ಔದು ಅತ್ಯಗತ್ಯ ರಕ್ತ ಪರೀಕ್ಷೆಗಳು

 

Leave a Reply

Your email address will not be published. Required fields are marked *