ನಗುವು ಸಹಜದ ಧರ್ಮ. ಕಾಮಿಡಿ ಮೂವಿಗಳು ಯಾರಿಗೆ ತಾನೇ ಇಷ್ಟ ಇಲ್ಲ ? ಅಮೇಜಾನ್ ಪ್ರೈಮ್ ನಲ್ಲಿರುವ ಟಾಪ್ 10 ಕಾಮಿಡಿ ಮೂವಿಗಳು ಇಲ್ಲಿವೆ.
3 ಈಡಿಯೆಟ್ಸ್ – ರಾಜು ಹಿರಾನಿ ಮ್ಯಾಜಿಕಲ್ ಮೂವಿ ಇದು. ಚೇತನ್ ಭಗತ್ ಕಾದಂಬರಿಯಾಧಾರಿತ ಚಿತ್ರ
ಗುಡ್ ನ್ಯೂಸ್ – ಅಕ್ಷಯ್ ಕುಮಾರ್ ಕಾಮಿಡಿ ಟೈಮಿಂಗ್ ಸೂಪರು. ಐ.ವಿ.ಎಫ್ ನಲ್ಲಿ ಆದ ಗೊಂದಲ ಚಿತ್ರದ ಕಥೆ
ಮುನ್ನಾ ಭಾಯಿ ಎಂಬಿಬಿಎಸ್ – ಸಂಜಯ್ ದತ್ ಕಮ್ ಬ್ಯಾಕ್ ಎಂದೇ ಹೇಳಬಹುದು. ಅರ್ಷದ್ ವಾರ್ಸಿಗೂ ಮೇಜರ್ ಬ್ರೇಕ್ ಥ್ರೂ ಈ ಚಿತ್ರ
ಹೇರಾ ಫೇರಿ – ನೋಡಿದಷ್ಟು ಸಲವು ಇನ್ನೊಮ್ಮೆ ನೋಡಬೇಕು ಅನ್ನಿಸುವ ಚಿತ್ರ. ಇಡೀ ಚಿತ್ರ ನಗುವ ಕಡಲಲ್ಲಿ ತೇಲಿಸುತ್ತದೆ
ಫುಕ್ರೆ – ಇದೊಂದು ಕಾಮಿಡಿ – ಥ್ರಿಲ್ಲರ್ ಚಿತ್ರ. ಫುಕ್ರೆ ಫ್ರಾಂಚೈಸಿ ಯ ಮೊದಲ ಚಿತ್ರ
ಅಂದಾಜ್ ಅಪ್ನಾ ಅಪ್ನಾ – ಸಲ್ಲು ಭಾಯ್ ಮತ್ತು ಆಮಿರ್ ಖಾನ್ ರ ಮೆಮೋರೇಬಲ್ ಮೂವಿ. ಮಸ್ಟ್ ವಾಚ್.
ಬಾವರ್ಚಿ – ರಾಜೇಶ್ ಖನ್ನಾ ರ ಅದ್ಭುತ ಚಿತ್ರ. ಯಾವ ಸಂದರ್ಭವೇ ಇರಲಿ ಈ ಚಿತ್ರ ಪ್ಲೇ ಆಗುತ್ತಿದ್ದರೆ ನೋಡೋಣ ಅನ್ನಿಸುತ್ತದೆ
ಚುಪ್ಕೆ ಚುಪ್ಕೆ – ಅಮಿತಾಬ್ – ಧರ್ಮೇಂದ್ರ ಜೋಡಿಯ ನಗೆ ಚಿತ್ರ. ಇಬ್ಬರ ಅಭಿನಯ ಒಬ್ಬರಿಗಿಂತ ಒಬ್ಬರನ್ನು ಮೀರಿಸುವಂತಿದೆ.
ಧಮಾಲ್ – ಹಾಸ್ಯ ಕಲಾವಿದರನ್ನೆಲ್ಲಾ ಒಟ್ಟಿಗೆ ಹಾಕಿ ಮಾಡಿದ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಚಿತ್ರ
ಪಡೋಸನ್ – ಹೆಸರು ಕೇಳಿದರೆ ಮೊದಲು ನೆನಪಾಗುವುದು ಮೆರೆ ಸಾಮ್ನೆ ವಾಲಿ ಖಿಡ್ಕಿ ಮೆ ಹಾಡು. ಹಾಡಿನಂತೆಯೇ ಚಿತ್ರವೂ ಬೊಂಬಾಟ್
ಹಾಗಾದರೆ ಇವತ್ತು ಯಾವ ಮೂವಿ ನೋಡುವ ನಿರ್ಧಾರ ನಿಮ್ಮದು ?